ವಿಶ್ರಾಂತಿ ನಡುವೆ ವಾಟರ್ ಬಾಯ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ

ಭುಜದ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಧರ್ಮಶಾಲಾದ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಹೊರಗುಳಿಸಿದ್ದು ವಾಟರ್ ಬಾಯ್ ಆಗಿ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಭುಜದ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಧರ್ಮಶಾಲಾದ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಹೊರಗುಳಿಸಿದ್ದು ವಾಟರ್ ಬಾಯ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. 
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿತ್ತು ಈ ವೇಳೆ 6ನೇ ಓವರ್ ನಲ್ಲಿ ಚೆಂಡಿನ ಆಕಾರದಲ್ಲೇನೋ ದೋಷ ಕಂಡುಬಂದುದ್ದರಿಂದ ಅಂಪಾಯರ್ ಗಳು ಚೆಂಡನ್ನು ಪರಿಶೀಲಿಸುತ್ತಿದ್ದರು. ಹೀಗಾಗಿ ಸ್ವಲ್ಪ ಹೊತ್ತು ಪಂದ್ಯ ಸ್ಧಗಿತಗೊಂಡಿತ್ತು. ಈ ಅವಕಾಶಕ್ಕಾಗಿಯೇ ಕಾದು ಕುಳಿತಂತಿದ್ದ ಕೊಹ್ಲಿ ಅಂಗಳಕ್ಕೆ ಓಡಿ ಬಂದರು. ಆಗ ಅವರ ಕೈಯಲ್ಲಿ ಪಾನೀಯದ ಬಾಲಟ್ ಇತ್ತು. 
ಒಂದೆರಡು ನಿಮಿಷಗಳ ಅವಕಾಶದಲ್ಲೇ ಅವರು ತಂಡದ ಆಟಗಾರರಿಗೆ ಕೆಲವು ಟಿಪ್ಸ್ ನೀಡಿದರು. ಮುಖ್ಯವಾಗಿ ಕರುಣ್ ನಾಯರ್ ಅವರಿಗೆ. ಕಾರಣ ಪಂದ್ಯದ ಮೊದಲ ಎಸೆತದಲ್ಲೇ ವಾರ್ನರ್ ಅವರ ಕ್ಯಾಚನ್ನು 3ನೇ ಸ್ಪಿಪ್ ನಲ್ಲಿದ್ದ ನಾಯರ್ ಕ್ಯಾಚ್ ಕೈಚೆಲ್ಲಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com