ಮುಂಬೈ ಐಪಿಎಲ್ ಚಾಂಪಿಯನ್: ಬೆತ್ತಲೆ ಕುಣಿದು ಸಂಭ್ರಮಿಸಿದ ಇಂಗ್ಲೆಂಡ್ ಕ್ರಿಕೆಟಿಗ ಬಟ್ಲರ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಮುಂಬೈ ಇಂಡಿಯನ್ಸ್...
ಜೋಸ್ ಬಟ್ಲರ್
ಜೋಸ್ ಬಟ್ಲರ್
ಲಂಡನ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. 
ಇನ್ನು ಮುಂಬೈ ಇಂಡಿಯನ್ಸ್ ಪಂದ್ಯ ಫೈನಲ್ ಪಂದ್ಯ ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟಿಗ ಜೋಸ್ ಬಟ್ಲರ್ ಬೆತ್ತಲೆ ಕುಣಿದು ಸಂಭ್ರಮಾಚರಣೆ ಮಾಡಿದ್ದಾರೆ. 
ಭಾನುವಾರ ಹೈದರಾಬಾದ್ ನಲ್ಲಿ ಐಪಿಎಲ್ ಫೈನಲ್ ಪಂದ್ಯ ಪುಣೆ ಮತ್ತು ಮುಂಬೈ ವಿರುದ್ಧ ನಡೆದಿತ್ತು. ಮುಂಬೈ 1 ರನ್ ನಿಂದ ರೋಚಕ ಗೆಲುವು ಸಾಧಿಸಿತು. ಈ ವೇಳೆ ಪಂದ್ಯ ವೀಕ್ಷಿಸುತ್ತಿದ್ದ ಜೋಸ್ ಬಟ್ಲರ್ ಮೈಯಲ್ಲಿ ಟವೆಲ್ ಬಿಟ್ಟರೆ ಬೇರೆ ಬಟ್ಟೆ ತುಣುಕಿರಲಿಲ್ಲ. ಮುಂಬೈ ಪಂದ್ಯ ಗೆಲ್ಲುತ್ತಿದ್ದಂತೆ ಬಟ್ಲರ್ ಹುಟ್ಟಿದ್ದ ಟವಲ್ ಅನ್ನು ಕಿತ್ತೆಸೆದು ನಗ್ನವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸ್ವದೇಶಕ್ಕೆ ಮರಳಿದ್ದ ಜೋಸ್ ಬಟ್ಲರ್ ತಮ್ಮ ಮನೆಯಲ್ಲೇ ಪಂದ್ಯವನ್ನು ವೀಕ್ಷಿಸಿದ್ದು ಮುಂಬೈ ಇಂಡಿಯನ್ಸ್ ಗೆಲುವನ್ನು ತನ್ನದೇ ಎಂಬಂತೆ ಸಂಭ್ರಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com