ಅಂಪೈರ್ ಅಲೀಂ ದಾರ್ ಗಡ್ಡದ ಹಿಂದಿನ ರಹಸ್ಯ ಹಾಶೀಂ ಆಮ್ಲ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಎಲೈಟ್ ಅಂಪೈರ್ ಪಾಕಿಸ್ತಾನದ ಅಲೀಂ ದಾರ್ ಹೊಸ ಲುಕ್ ನೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದು...
ಅಲೀಂ ದಾರ್
ಅಲೀಂ ದಾರ್
ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಎಲೈಟ್ ಅಂಪೈರ್ ಪಾಕಿಸ್ತಾನದ ಅಲೀಂ ದಾರ್ ಹೊಸ ಲುಕ್ ನೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 
ಈ ಹಿಂದೆ ಕ್ಲೀನ್ ಶೇವ್ ಮಾಡಿಕೊಂಡು ಅಂಪೈರಿಂಗ್ ಮಾಡುತ್ತಿದ್ದ ಅಲೀಂ ದಾರ್ ಈಗ ಉದ್ದ ಗಡ್ಡ ಬಿಟ್ಟಿದ್ದಾರೆ. ತಮ್ಮ ಈ ಹೊಸ ಲುಕ್ ಗೆ ದಕ್ಷಿಣ ಆಫ್ರಿಕಾ ಆಟಗಾರ ಹಾಶೀಂ ಆಮ್ಲ ಸ್ಫೂರ್ತಿ ಎಂದು ದಾರ್ ಹೇಳಿದ್ದಾರೆ. 
ಗಡ್ಡ ಬಿಡಬೇಕು ಎಂಬ ಆಸೆ ನನಗೆ ಬಹಳ ವರ್ಷಗಳಿಂದಲೂ ಇತ್ತು. ದಕ್ಷಿಣ ಆಫ್ರಿಕಾ ತಂಡದ ಸರಣಿಯ ವೇಳೆ ಆಮ್ಲ ಕೂಡ ತಕ್ಷಣದಿಂದಲೇ ಗಡ್ಡ ಬಿಡಲು ಆರಂಭಿಸಿ ಎಂದು ಹೇಳಿದ್ದರು ಎಂದು ದಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com