ಮೊದಲ ಟೆಸ್ಟ್: 294 ರನ್ ಗಳಿಗೆ ಲಂಕಾ ಆಲ್ ಔಟ್, 122 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ
ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 294 ರನ್ ಗಳಿಗೆ ಆಲ್ ಔಟ್ ಆಗಿದ್ದು, ಭಾರತದ ವಿರುದ್ಧ 122 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಕೋಲ್ಕತಾ: ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 294 ರನ್ ಗಳಿಗೆ ಆಲ್ ಔಟ್ ಆಗಿದ್ದು, ಭಾರತದ ವಿರುದ್ಧ 122 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಪಂದ್ಯದ ನಾಲ್ಕನೇ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಅಂತಿಮವಾಗಿ 294 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ ನ ಅಂತಿಮ ಘಟ್ಟದಲ್ಲಿ ರಂಗನಾ ಹೆರಾತ್ ಪ್ರತಿರೋಧ ತೋರಿ ಅರ್ಧಶತಕ ಸಿಡಿಸಿದರು. 67 ರನ್ ಗಳಿಸಿದ ಹೆರಾತ್ ರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್ ಗೆ ಅಟ್ಟಿದರು. ಅಂತಿಮವಾಗಿ 16 ರನ್ ಗಳಿಸಿದ್ದ ಲಕ್ಮಲ್ ಶಮಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆಗುವುದರೊಂದಿಗೆ ಶ್ರೀಲಂಕಾ ಇನ್ನಿಂಗ್ಸ್ ಗೆ ತೆರೆ ಬಿದ್ದಿತು.
ಲಂಕಾ ಪರ ತಿರುಮಾನ್ನೆ, ಮ್ಯಾಥ್ಯೂಸ್ ಮತ್ತು ಹೆರಾತ್ ಅರ್ಧಶತಕ ಸಿಡಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ ಮತ್ತು ಮಹಮದ್ ಶಮಿ ತಲಾ 4 ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್ 2ವಿಕೆಟ್ ಕಬಳಿಸಿದರು.
ಪ್ರಸ್ತುತ ಶ್ರೀಲಂಕಾ ತಂಡ ಭಾರತದ ವಿರುದ್ಧ 122 ರನ್ ಗಳ ಮುನ್ನಡೆ ಸಾಧಿಸಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 7.2 ಓವರ್ ಗಳಲ್ಲಿ 29 ರನ್ ಗಳಿಸಿದೆ. ಆರಂಭಿಕರಾದ ಕೆಎಲ್ ರಾಹುಲ್ (16 ರನ್) ಮತ್ತು ಶಿಖರ ಧವನ್ (13 ರನ್) ಕ್ರೀಸ್ ನಲ್ಲಿದ್ದಾರೆ.