ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದೂ ದಿನಲೂ ಪೂಜಾರ ಬ್ಯಾಟಿಂಗ್ ನಡೆಸುವ ಮೂಲಕ ಈ ಸಾಧನೆ ಗೈದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಮಳೆಯಿಂದಾಗಿ 2 ದಿನಗಳ ಆಟಕ್ಕೆ ತೊಂದರೆಯಾಗಿದ್ದ ಈ ಪಂದ್ಯದಲ್ಲಿ ಪೂಜಾರ ಮೊದಲ ದಿನ ಮೊದಲ ಸೆಷನ್ ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಅಂದು ಮಳೆಯಿಂದಾಗಿ ಆ ದಿನದ ಆಟ ರದ್ದಾಗಿತ್ತು. ಬಳಿಕ 2ನೇ ದಿನ ಊಟದ ವಿರಾಮಕ್ಕೂ ಮೊದಲು ಸುರಿದ ಮಳೆ ಇಡೀ ದಿನದ ಪಂದ್ಯವನ್ನು ಆಪೋಷಣ ತೆಗೆದುಕೊಂಡಿತ್ತು. ಆಗ ಮೊದಲ ಸೆಷನ್ ನಲ್ಲಿ ಪೂಜಾರ ಬ್ಯಾಟಿಂಗ್ ಮಾಡಿದ್ದರು. ಬಳಿಕ ಮೂರನೇ ದಿನದಾಟದಲ್ಲಿ ಭಾರತ ಕೇವಲ 172 ರನ್ ಗಳಿಗೆ ಆಲ್ ಔಟ್ ಆಗಿತ್ತು, ಬಳಿಕ ಬ್ಯಾಟಿಂಗ್ ನಡೆಸಿದ್ದ ಲಂಕಾ ತಂಡ 272 ರನ್ ಗಳಿಗೆನಾಲ್ಕನೇ ದಿನ ಆಲ್ ಔಟ್ ಆಗಿತ್ತು. ಅಂದು ದಿನದಾಟದ ಅಂತ್ಯದಲ್ಲಿ ಅಂತಿಮ ಸೆಷನ್ ನಲ್ಲಿ ಭಾರತದ ಪರ ಬ್ಯಾಟಿಂಗ್ ಮಾಡಿದ್ದ ಪೂಜಾರ 2 ರನ್ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದು ಕೊಂಡಿದ್ದರು. ಇದು ಮತ್ತೆ ಬ್ಯಾಟಿಂಗ್ ಮಾಡಿದ ಪೂಜಾರ 51 ಎಸೆಚಗಳಲ್ಲಿ 22 ರನ್ ಗಳಿಸಿದ್ದರು.