ಐಸಿಸಿ ಏಕದಿನ ರ್ಯಾಂಕಿಂಗ್: ಟೀಂ ಇಂಡಿಯಾ ಮಹಿಳಾ ತಂಡ 4ನೇ ಸ್ಥಾನಕ್ಕೇರಿಕೆ

ಅಂತಾರಾಷ್ಟ್ರೀಯ ಏಕದಿನ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಇದೇ ಮೊದಲ ಬಾರಿಗೆ 4ನೇ ಸ್ಥಾನಕ್ಕೇರಿದೆ...
Women Team
Women Team
ದುಬೈ: ಅಂತಾರಾಷ್ಟ್ರೀಯ ಏಕದಿನ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಇದೇ ಮೊದಲ ಬಾರಿಗೆ 4ನೇ ಸ್ಥಾನಕ್ಕೇರಿದೆ. 
ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ 3 ಅಂಕಗಳನ್ನು ಗಳಿಸಿದ್ದು ಒಟ್ಟಾರೆ 116 ಅಂಕಗಳ ಮೂಲಕ ನಾಲ್ಕನೇ ಸ್ಥಾನಕ್ಕೇರಿದೆ. ಇನ್ನು 118 ಅಂಕಗಳನ್ನು ಗಳಿಸಿರುವ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. 
ಐಸಿಸಿ ರ್ಯಾಂಕಿಂಗ್ ನಲ್ಲಿ ತಂಡ ನಾಲ್ಕನೇ ಸ್ಥಾನಕ್ಕೇರಿರುವುದಕ್ಕೆ ತಂಡದ ನಾಯಕಿ ಮಿಥಾಲಿ ರಾಜ್ ಅವರು ಹರ್ಷ ವ್ಯಕ್ತಪಡಿಸಿದ್ದು ಮುಂದಿನ ಸರಣಿಗಳನ್ನು ಜಯಿಸುವ ಮೂಲಕ 3ನೇ ಸ್ಥಾನಕ್ಕೆ ಬಡ್ತಿ ಪಡೆಯುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 
2017ರ ಮಹಿಳಾ ವಿಶ್ವಕಪ್ ಗೆದ್ದ ಇಂಗ್ಲೆಂಡ್(128) ಹಾಗೂ ಆಸ್ಟ್ರೇಲಿಯಾ(128) ಅಂಕಗಳನ್ನು ಪಡೆಯುವ ಮೂಲಕ ಸಮ ಸ್ಥಾನದಲ್ಲಿವೆ. 101 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ 5ನೇ ಹಾಗೂ 93 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 6ನೇ ಸ್ಥಾನಕ್ಕೆ ಕುಸಿದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com