ಗುವಾಹತಿ: ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಗುವಾಹತಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 119 ರನ್ ಗಳ ಅಲ್ಪಗುರಿಯನ್ನು ಆಸ್ಟ್ರೇಲಿಯಾ ತಂಡ ಕೇವಲ 2 ವಿಕೆಟ್ ಕಳೆದುಕೊಂಡು, ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಭಾರತ ನೀಡಿದ 118 ರನ್ ಗಳ ಗುರಿ ಬೆನ್ನು ಹತ್ತಿದೆ ಆಸ್ಟ್ರೇಲಿಯಾ ತಂಡಕ್ಕೆ ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ಆರಂಭಿಕ ಆಘಾತ ನೀಡಿದರಾದರೂ, ಅದೇ ರೀತಿಯ ದಾಳಿ ಮುಂದವರೆಯಲಿಲ್ಲ. ಒಂದೆಡೆ ಆಸಿಸ್ ನ ಹೆನ್ರಿಕ್ಸ್ (62 ರನ್) ಹಾಗೂ ಹೆಡ್ (48 ರನ್) ಗ್ರೀಸ್ ಗೆ ಅಂಟಿಕೊಂಡು ರಕ್ಷಣಾತ್ಮಕ ಆಟವಾಡಿದ್ದರಿಂದ ಭಾರತಕ್ಕೆ ವಿಕೆಟ್ ಪಡೆಯುವ ಯಾವುದೇ ಅವಕಾಶ ಇಲ್ಲದಂತಾಯಿತು.
ಅಂತಿಮವಾಗಿ ಆಸ್ಟ್ರೇಲಿಯಾ ತಂಡ 15.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿ 8 ವಿಕೆಟ್ ಅಂತರದಲ್ಲಿ ಜಯ ಸಾಧಿಸಿದರು.