ಟಿ20 ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಬರೆದ ಡೇವಿಡ್ ಮಿಲ್ಲರ್

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವೇಗದ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ದಾಖಲೆ...
ಡೇವಿಡ್ ಮಿಲ್ಲರ್
ಡೇವಿಡ್ ಮಿಲ್ಲರ್
ಪೊಚ್ಚೆಸ್ಟ್ರೋಮ್(ದಕ್ಷಿಣ ಆಫ್ರಿಕಾ): ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವೇಗದ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ದಾಖಲೆ ಬರೆದಿದ್ದಾರೆ. 
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಡೇವಿಡ್ ಮಿಲ್ಲರ್ ಭರ್ಜರಿ 9 ಸಿಕ್ಸರ್ ಮತ್ತು ಏಳು ಬೌಂಡರಿ ಸೇರಿ ಕೇವಲ 35 ಎಸೆತಗಗಳಲ್ಲಿ 100 ರನ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ಬಾಂಗ್ಲಾದೇಶದ ಬೌಲರ್ ಮೊಹಮ್ಮದ್ ಸೈಫುದ್ದೀನ್ ರ ಒಂದೇ ಓವರ್ ನಲ್ಲಿ 5 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. 
ಬಾಂಗ್ಲಾದೇಶ ಆಟಗಾರರು ಬಿಟ್ಟ ಒಂದು ಕ್ಯಾಚ್ ಡೇವಿಡ್ ಮಿಲ್ಲರ್ ವೇಗದ ಶತಕ ಸಿಡಿಸಲು ಕಾರಣವಾಯಿತು. ಡೇವಿಡ್ ಮಿಲ್ಲರ್ ಅವರು ಖಾತೆಯನ್ನೇ ತೆಗೆದಿದ್ದಾಗ ಕ್ಯಾಚ್ ವೊಂದನ್ನು ನೀಡಿದರು. ಈ ಕ್ಯಾಚ್ ಅನ್ನು ಬಾಂಗ್ಲಾ ಆಟಗಾರರು ಬಿಟ್ಟಿದ್ದರಿಂದ ಬಾರಿ ಬೆಲೆ ತೆರಬೇಕಾಗಿದೆ. 
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ ಭರ್ಜರಿ ಶತಕದ ಆಸರೆಯಿಂದ ನಿಗದಿತ 20 ಓವರ್ ಮುಕ್ತಾಯಕ್ಕೆ 224 ರನ್ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com