ವಿಕೆಟ್ ಹಿಂದೆ ತಾವೇ 'ಮಾಸ್ಟರ್' ಎಂಬುದನ್ನು ಮತ್ತೆ ಸಾಬೀತು ಪಡಿಸಿದ ಧೋನಿ!

ಸ್ಟಂಪಿಂಗ್ ಮೂಲಕ ಈಗಾಗಲೇ ವಿಶ್ವದಾಖಲೆ ನಿರ್ಮಾಣ ಮಾಡಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಾವು ವಿಕೆಟ್ ಹಿಂದಿನ ಮಾಸ್ಟರ್ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಧೋನಿ ಸ್ಟಂಪಿಂಗ್
ಧೋನಿ ಸ್ಟಂಪಿಂಗ್
Updated on: 
ಕೊಲಂಬೋ: ಸ್ಟಂಪಿಂಗ್ ಮೂಲಕ ಈಗಾಗಲೇ ವಿಶ್ವದಾಖಲೆ ನಿರ್ಮಾಣ ಮಾಡಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಾವು ವಿಕೆಟ್ ಹಿಂದಿನ ಮಾಸ್ಟರ್ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟಿ20 ಪಂದ್ಯದಲ್ಲಿ ಧೋನಿ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ಅವರನ್ನು ಅಚ್ಚರಿಯ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ಪಂದ್ಯದ ಏಳನೇ ಓವರ್ ನಲ್ಲಿ ಭಾರತದ ಚಾಹಲ್ ಬೌಲ್ ಮಾಡುತ್ತಿದ್ದರು.  7ನೇ ಓವರ್ ನ ಮೂರನೇ ಎಸೆತದಲ್ಲಿ ಚಾಹಲ್ ಎಸೆದ ಚೆಂಡು ತಿರುವು ಪಡೆಯುತ್ತಿದ್ದಂತೆಯೇ ಮ್ಯಾಥ್ಯೂಸ್ ಫ್ರಂಟ್ ಫುಟ್ ಮೂಲಕ ಅದನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದಾರೆ. ಈ ವೇಳೆ ಚೆಂಡು ಅವರ ಬ್ಯಾಟ್ ಅನ್ನು ವಂಚಿಸಿ ಔಟ್ ಸೈಡ್ ಎಡ್ಜ್ ನಿಂದ ಆಚೆಗೆ ಹೋಗಿ ವಿಕೆಟ್  ಹಿಂದಿದ್ದ ಧೋನಿ ಕೈ ಸೇರಿತ್ತು.

ಚೆಂಡನ್ನು ಹಿಡಿತಕ್ಕೆ ಪಡೆದ ಧೋನಿ ತತ್ ಕ್ಷಣವೇ ಬೇಲ್ಸ್ ಎಗರಿಸಿದ್ದರು, ಆಗ ಔಟ್ ಗಾಗಿ ಅಂಪೈರ್ ಬಳಿ ಮನವಿ ಮಾಡಲಾಯಿತು. ಮೇಲ್ನೋಟಕ್ಕೆ ಮ್ಯಾಥ್ಯೂಸ್ ನಾಟ್ ಔಟ್ ಎಂದು ತಿಳಿಯುತ್ತಿತ್ತಾದರೂ, ಮೂರನೇ ಆಂಪೈರ್ ಕ್ಯಾಮೆರಾ ಮೂಲಕ ಸೂಕ್ಷ್ಮವಾಗಿ ಗಮನಿಸಿದಾಗ  ಮ್ಯಾಥ್ಯೂಸ್ ಬಲಗಾಲು ಕೊಂಚ ಗೆರೆ ದಾಟಿತ್ತು. ಸುಮಾರು ಹೊತ್ತಿನ ಪರೀಕ್ಷೆ ಬಳಿಕ ಮೂರನೇ ಅಂಪೈರ್ ಇದನ್ನು ಔಟ್ ಎಂದು ತೀರ್ಪು ನೀಡಿದರು. ಈ ತೀರ್ಪಿನಿಂದ ಮ್ಯೂಥ್ಯಾಸ್ ಅಚ್ಚರಿಯಲ್ಲೇ ಪೆವಿಲಿಯನ್ ಗೆ ವಾಪಸ್ ಆದರು. ಇದು ಧೋನಿ ಅವರ 101ನೇ ಸ್ಟಂಪಿಂಗ್ ಆಗಿದೆ. 

ಈ ಹಿಂದೆ 100 ಸ್ಟಂಪಿಂಗ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಹೆಸರಿಲ್ಲಿದ್ದ ದಾಖಲೆಯನ್ನು ಧೋನಿ ಮುರಿದಿದ್ದು, ಇದೀಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದ್ದಾರೆ.

ಈ ಮೂಲಕ ಮಹೇಂದ್ರ ಸಿಂಗ್ ಧೋನಿ ತಾವು ವಿಕೆಟ್ ಹಿಂದಿನ ಚಾಣಾಕ್ಷ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com