ಸುಪ್ರೀಂಕೋರ್ಟ್ ನೇಮಿತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಡಳಿತ ಸಮಿತಿ ಹಾಗೂ ಬಿಸಿಸಿಐ ಸಿಇಓ ರಾಹುಲ್ ಜೊಹ್ರಿ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಶಾಸ್ತ್ರಿ ತಮ್ಮ ಮನವಿ ಸಲ್ಲಿಸಿದರು. ಶ್ರೀಲಂಕಾ ಪ್ರವಾಸದಿಂದ ಈಗಷ್ಟೇ ವಾಪಸಾಗಿರುವ ತಂಡ ಸೆಪ್ಟೆಂಬರ್ 17ರಿಂದ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ ಸರಣಿಯಲ್ಲಿ ಕಣಕ್ಕಳಿಯಲಿದೆ.