ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಗರಿಷ್ಠ ರನ್ ಸರದಾರರಾಗಿ ದಾಖಲೆ ನಿರ್ಮಿಸಿದ್ದಾರೆ.
ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಅವರ ಹೆಸರಲ್ಲಿತ್ತು. ಆರ್ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಕೊಹ್ಲಿ ಈ ದಾಖಲೆಯನ್ನು ನಿರ್ಮಿಸಿದ್ದಾರೆ.
ಸುರೇಶ್ ರೈನಾ 163 ಪಂದ್ಯಗಳಿಂದ 4558 ರನ್ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ 153 ಪಂದ್ಯಗಳಿಂದ 4619 ರನ್ ದಾಖಲಿಸಿದರು. ಉಳಿದಂತೆ ರೋಹಿತ್ ಶರ್ಮಾ 163 ಪಂದ್ಯಗಳಿಂದ 4345 ರನ್ ಬಾರಿಸಿ ಗರಿಷ್ಠ ರನ್ ಬಾರಿಸಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.