ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ತಮ್ಮದೇ ಆದ ಶೈಲಿಯಲ್ಲಿ ಶುಭಕೋರಿರುವ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು, ಸಾಕಷ್ಟು ತ್ಯಾಗ ಬಲಿದಾನಗಳಿಂದ ನಮಗೆ ಸಿಕ್ಕ ಸ್ವತಂತ್ರವನ್ನು ಸ್ವೇಚ್ಛಾಚಾರ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಟ್ವೀಟರ್ ನಲ್ಲಿ ಈ ಬಗ್ಗೆ ಸ್ಫೂರ್ತಿಯುತ ಸಂದೇಶ ರವಾನೆ ಮಾಡಿದ ಸಚಿನ್, 'ಜೀವನದಲ್ಲಿ ಪ್ರತಿಯೊಂದನ್ನು ಕಷ್ಟಪಟ್ಟು ಸಂಪಾದನೆ ಮಾಡುತ್ತೇವೆ. ಸ್ವತಂತ್ರವೂ ಹಾಗೇ. ಲೆಕ್ಕವಿಲ್ಲದಷ್ಟು ವಿಚಾರಗಳಲ್ಲಿ ಒಂದಾದ ನಮ್ಮ ಟೀಂ ಇಂಡಿಯಾ ಕೂಡಾ ನಮ್ಮ ಸ್ವತಂತ್ರ ಸೇನಾನಿಗಳ ಹೋರಾಟ ಹಾಗು ತ್ಯಾಗವಿಲ್ಲದೇ ಆಗಿಲ್ಲ. ಈ ಸ್ವತಂತ್ರವನ್ನು ನಾವು ಬೇಕಾಬಿಟ್ಟಿ ಬಳಸಿಕೊಳ್ಳಬಾರದು' ಎಂದು ಟ್ವೀಟ್ ಮಾಡಿದ್ದಾರೆ.