ಭಾರತ- ವಿಂಡೀಸ್ ಟೆಸ್ಟ್ ಸರಣಿ: 15 ಸದಸ್ಯರ ವೆಸ್ಟ್ ಇಂಡೀಸ್ ತಂಡ ಪ್ರಕಟ
ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ವೆಸ್ಟ್ ಇಂಡೀಸ್ 15 ಸದಸ್ಯರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಡಗೈ ಬ್ಯಾಟ್ಸ್ ಮನ್ ಡೆವೊನ್ ಸ್ಮಿತ್ ನನ್ನು ಹೊರಗಿಡಲಾಗಿದೆ.
ಕಿಂಗ್ ಸ್ಟನ್: ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ವೆಸ್ಟ್ ಇಂಡೀಸ್ 15 ಸದಸ್ಯರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಡಗೈ ಬ್ಯಾಟ್ಸ್ ಮನ್ ಡೆವೊನ್ ಸ್ಮಿತ್ ನನ್ನು ಹೊರಗಿಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಅಕ್ಟೋಬರ್ 4ರಿಂದ ಭಾರತದಲ್ಲಿ ಪ್ರಾರಂಭವಾಗಲಿದೆ.ಸ್ಮಿತ್ ಸ್ಥಾನಕ್ಕೆ ಸುನೀ ಅಂಬ್ರೀಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಸುನೀ;ಲ್ ಶ್ರೀಲಂಕಾ ವಿರುದ್ಧದ ಟೆಸ್ಟ್ ನಲ್ಲಿ ಎರಡು ಬಾರಿ ಅರ್ಧಶತಕ ಗಳಿಸಿ ಸಾಧನೆ ಮಾಡಿದ್ದರು.
ಇದೇ ವೇಳೆ ವಿಂಡೀಸ್ ತಂಡಕ್ಕೆ ಅಲ್ಜಾರಿ ಜೋಸೆಫ್ ಸಹ ಪುನರಾಗಮನವಾಗಿರುವುದು ವಿಶೇಷ.
ಸೆಪ್ಟೆಂಬರ್ 26ಕ್ಕೆ ಭಾರತಕ್ಕೆ ಆಗಮಿಸುವ ವಿಂಡೀಸ್ ಪಡೆ ಸುಮಾರು ಏಳು ವಾರಗಳ ಕಾಲ ಭಾರತದಲ್ಲಿರಲಿದೆ. ಈ ವೇಳೆ ಎರಡು ಟೆಸ್ಟ್, ಐದು ಏಕದಿನ, ಮತ್ತು ಮೂರು ಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ವಿರುದ್ಧ ಸ್ಪರ್ಧಿಸಲಿದ್ದಾರೆ.
ಬಾಂಗ್ಲಾ ವಿರುದ್ಧ 2-0 ಸರಣಿ ಗೆಲುವಿನ ಬಳಿಕ ವಿಡೀಸ್ ಕ್ರಿಕೆಟಿಗರು ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ.