'ಬಾಲ್ ಆಫ್ ದಿ ಸೆಂಚುರಿ': ಶೇನ್ ವಾರ್ನ್ ಬೌಲಿಂಗ್ ಅನ್ನೂ ಮೀರಿಸುವಂತಿದೆ ಈ 7 ವರ್ಷದ ಪೋರನ ಬೌಲಿಂಗ್!

Published On :
ನವದೆಹಲಿ: ಆಸಿಸ್ ಬೌಲಿಂಗ್ ದಂತಕಥೆ ಶೇನ್ ವಾರ್ನ್ ಹೆಸರಿನಲ್ಲಿದ್ದ 'ಬಾಲ್ ಆಫ್ ದಿ ಸೆಂಚುರಿ'ಗೆ 7 ವರ್ಷದ ಪೋರ ಸಂಚಕಾರ ತಂದಿದ್ದು, ಆತ ಎಸೆದ ಒಂದು ಬಾಲ್ ಇದೀಗ ಇಂಟರ್ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.
ಜಮ್ಮು ಕಾಶ್ಮೀರದ ಗಂದೆರ್ಬಲ್ ಜಿಲ್ಲೆಯ ಏಳು ವರ್ಷದ ಬಾಲಕ ಅಹಮದ್ ತನ್ನ ಮಾಂತ್ರಿಕ ಸ್ಪಿನ್ ನಿಂದಾಗಿ ಇದೀಗ ಇಂಟರ್ ನೆಟ್ ಸೆನ್ಸೇಷನ್ ಆಗಿ ಬದಲಾಗಿದ್ದಾನೆ. ಆತ ಎಸೆದ ಒಂದು ಚೆಂಡು ಮೀಟರ್ ಗಟ್ಟಲೆ ತಿರುವು ಪಡೆದು ವಿಕೆಟ್ ಎಗರಿಸಿದೆ. ಆತ ವಿಕೆಟ್ ಪಡೆದ ರೀತಿ ಇದೀಗ ಭಾರಿ ವೈರಲ್ ಆಗುತ್ತಿದೆ.
ಅಲ್ಲದೆ ಸ್ವತಃ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಕೂಡ ಈತನ ಬೌಲಿಂಗ್ ನೋಡಿ ಹೊಗಳಿದ್ದು, ವಾರ್ನ್ ರಿಂದ ಹೊಗಳಿಕೆ ಬಂದ ನಂತರದಿಂದ ಟ್ವಿಟರ್ನಲ್ಲಿ ಈ ಪುಟ್ಟ ಪೋರ ಸೆನ್ಸೇಷನ್ ಆಗಿ ಬದಲಾಗಿದ್ದಾನೆ. ಈ ಪುಟ್ಟ ಬಾಲಕ ಸ್ಥಳೀಯ ಕ್ರಿಕೆಟ್ ಮ್ಯಾಚ್ ನಲ್ಲಿ ತಾನು ಎಸೆಯುವ ಕ್ರಿಕೆಟ್ ಬಾಲ್ ಸ್ಪಿನ್ ಆಗಿ ವಿಕೆಟ್ ಹೊಡೆಯುವ ದೃಶ್ಯ ಅಧ್ಬುತವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಬಾಲಕನ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹರಿಬಿಟ್ಟ ನಂತರ ಸಾಕಷ್ಟು ವೈರಲ್ ಆಗಿದೆ. ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಈ ವಿಡಿಯೋ ನೋಡಿದ್ದು, ಇದು ಅಧ್ಬುತವಾದದ್ದು! ಉತ್ತಮ ಎಸೆತ ಎಂದು ಟ್ವೀಟ್ ಮಾಡಿದ್ದಾರೆ. ವಾರ್ನ್ರ ಈ ಹೊಗಳಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಬಾಲಕ ಅಹಮದ್ ಭಾರಿ ಫೇಮಸ್ ಆಗಿದ್ದಾನೆ.
This is outstanding ! Well bowled young man
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiShane Warneಶೇನ್ ವಾರ್ನ್Cricket Offbeatಕ್ರಿಕೆಟ್ ಸ್ವಾರಸ್ಯBall of the CenturyKashmir Cricket Kidಬಾಲ್ ಆಫ್ ದಿ ಸೆಂಚುರಿಕಾಶ್ಮೀರ ಕ್ರಿಕೆಟ್ ಪೋರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


