ದಿನದ ಮೊದಲ ಅವಧಿಯಲ್ಲಿ ಕೊಹ್ಲಿ ಹಾಗೂ ಪೂಜಾರ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ರಕ್ಷಣಾತ್ಮಕವಾಗಿ ಆಟವಾಡುತ್ತಾ ಮೊದಲ ಇನ್ನಿಂಗ್ಸ್ ನಲ್ಲಿ ಸಾಧ್ಯವಾದಷ್ಟು ರನ್ ಪೇರಿಸುವುದು ಟೀಮ್ ಇಂಡಿಯಾ ಗುರಿಯಾಗಿದೆ. ಆರಂಭದಲ್ಲಿ ಕೊಹ್ಲಿ ಸ್ವಲ್ಪ ಆತಂಕವನ್ನು ಎದುರಿಸಿದರೂ ಪೂಜಾರ ತಮ್ಮ ಕಲಾತ್ಮಕ ಆಟದ ಮೂಲಕ ಮನರಂಜಿಸಿದರು. ಅಲ್ಲದೆ ಆಸ್ಟ್ರೇಲಿಯಾ ಮಣ್ಣಿನಲ್ಲಿ ಎರಡನೇ ಶತಕ ಸಾಧನೆ ಮಾಡಿದರು. ಈ ಎರಡು ಶತಕಗಳು ಇದೇ ಸರಣಿಯಲ್ಲಿ ದಾಖಲಾಗಿರುವುದು ಅಷ್ಟೇ ಮಹತ್ವವನ್ನು ಗಿಟ್ಟಿಸಿಕೊಳ್ಳುತ್ತದೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ ಬ್ಯಾಟ್ ನಿಂದ ಸಿಡಿದ 17ನೇ ಶತಕವಾಗಿದೆ.