ಬೌಲರ್ ಗಳ ಆರ್ಭಟ, ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್, ಒಂದೇ ದಿನ 15 ವಿಕೆಟ್ ಪತನ!

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಂದು ಅಕ್ಷರಶಃ ಬೌಲರ್ ಗಳು ಮೆರೆದಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಂದು ಅಕ್ಷರಶಃ ಬೌಲರ್ ಗಳು ಮೆರೆದಾಡಿದ್ದಾರೆ.
ಕ್ರಿಕೆಟ್ ಎಂಬುದು ಬ್ಯಾಟ್ಸಮನ್ ಗಳ ಆಟ ಎಂದು ಕರೆಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಅದು ತಪ್ಪು ಎಂಬ ಪರಿಕಲ್ಪನೆ ಆಸಿಸ್ ವಿರುದ್ಧ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಸಾಕ್ಷಿಯಾಗಿತ್ತು. 3ನೇ ದಿನದಾಟ ಅಂತ್ಯವಾಗಿದ್ದು, ಇಡೀ ದಿನ ಬೌಲರ್ ಗಳು ಬ್ಯಾಟ್ಸಮನ್ ಗಳನ್ನು ಒಂದೇ ಸಮನೆ ಗೋಳು ಹೊಯ್ದುಕೊಂಡಿದ್ದಾರೆ. ಅಕ್ಷರಶಃ ಬ್ಯಾಟ್ಸಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. 
ಕೇವಲ ಇಂದು ಒಂದೇ ದಿನದಲ್ಲಿ ಬರೊಬ್ಬರಿ 15 ವಿಕೆಟ್ ಗಳು ಪತನವಾಗಿದೆ. ಬೌಲರ್ ಗಳ ಪಾರಮ್ಯ ಹೇಗಿತ್ತು ಎಂದರೆ ಇಂದು ಬ್ಯಾಟ್ಸಮನ್ ಒಬ್ಬರು ಗಳಿಸಿದ ಗರಿಷ್ಠ ರನ್ 28ರನ್... ಅದೂ ಕೂಡ ಭಾರತದ ಮಯಾಂಕ್ ಅಗರ್ವಾಲ್ ಗಳಿಸಿದ್ದು..ಆಸ್ಚ್ರೇಲಿಯಾ ಮತ್ತು ಭಾರತದ ಬ್ಯಾಟ್ಸಮನ್ ಗಳೂ ಒಳಗೊಂಡಂತೆ ಇಂದು ನಾಲ್ಕು ಬ್ಯಾಟ್ಸಮನ್ ಗಳು ಶೂನ್ಯ ಸುತ್ತಿದ್ದು, 6 ಮಂದಿ ಬ್ಯಾಟ್ಸಮನ್ ಗಳು ಒಂದಂಕಿ ರನ್ ದಾಟಲು ಪರದಾಡಿ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಇಡೀ ದಿನ ಬೌಲರ್ ಗಳು ಆರ್ಭಟಿಸಿದ್ದಾರೆ.
ನಿನ್ನೆವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡ ಇಂದು 151 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಅಂತೆಯೇ ಭಾರತೀಯ ಬ್ಯಾಟ್ಸಮನ್ ಗಳೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಭಾರತದ ಬುಮ್ರಾ ದಾಳಿಗೆ ಹೇಗೆ ಕಾಂಗರೂಗಳ ಬ್ಯಾಟಿಂಗ್ ಲೈನ್ ಅಪ್ ಕುಸಿಯಿತೋ ಅದೇ ರೀತಿ ಆಸಿಸ್ ವೇಗಿ ಪ್ಯಾಟ್ ಕಮಿನ್ಸ್ ದಾಳಿಗೆ ಭಾರತೀಯ ಅಗ್ರ ಕ್ರಮಾಂಕದ ಬ್ಯಾಟ್ಸಮನ್ ಗಳೂ ಕೂಡ ತರಗೆಲೆಗಳಂತೆ ಕುಸಿದರು. ಪ್ರಮುಖವಾಗಿ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಶೂನ್ಯ ಸಂಪಾದನೆ  ಮಾಡಿ ಔಟಾದ ರೀತಿಯಂತೂ ಅಚ್ಚರಿ ಮೂಡಿಸುತ್ತದೆ.
ಒಟ್ಟಾರೆ ಇಂದಿನ ಆಟ ಬೌಲರ್ ಗಳಿಗೇ ಸೀಮಿತವಾಗಿತ್ತು ಎಂದರೆ ತಪ್ಪಾಗಲಾರದು...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com