ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಆಟಗಾರ ಕನ್ನಡಿಗ ಮಾಯಾಂಕ್ ಅಗರವಾಲ್ ಬ್ಯಾಟಿಂಗ್ ನಂತರ ಇದೀಗ ಫೀಲ್ಡಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.
ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಆ್ಯರೋನ್ ಫಿಂಚ್ ಬಾರಿಸಿದ ಚೆಂಡನ್ನು ಮಿಡ್ ವಿಕೆಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾಯಾಂಕ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇದರ ಜತೆಗೆ ರವೀಂದ್ರ ಜಡೇಜಾ ಬೌಲಿಂಗ್ ನಲ್ಲೂ ಉಸ್ಮಾನ್ ಖವಾಜಾ ಅವರ ಕ್ಯಾಚ್ ಹಿಡಿದು ಎಲ್ಲರ ಮೆಚ್ಚುಗೆಗೆ ಮಾಯಾಂಕ್ ಪಾತ್ರರಾಗಿದ್ದಾರೆ.