ಮೆಲ್ಬರ್ನ್: ಟೀಂ ಇಂಡಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿನ ಸುಳಿಗೆ ಸಿಲುಕಿದ್ದು ಇನ್ನು ಮೈದಾನದಲ್ಲಿ ಅಭಿಮಾನಿಗಳ ಹುಚ್ಚಾಟ ಹೆಚ್ಚಾಗಿದ್ದು ಫೀಲ್ಡಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಜನಾಂಗೀಯ ನಿಂದನೆ ಮಾಡಿದ ಆರೋಪಕ್ಕೆ ಆಸಿಸ್ ಅಭಿಮಾನಿಗಳು ಗುರಿಯಾಗಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾಗೆ ಹಲವು ದೂರುಗಳು ಬಂದಿವೆ. ಇಷ್ಟೇ ಅಲ್ಲ ಪೂರ ವಿಡಿಯೋ ಫೋಟೋಜ್ ಕೂಡ ನೀಡಲಾಗಿದೆ.
ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಎರಡು ದಿನದಲ್ಲಿ ಆಸ್ಟ್ರೇಲಿಯಾ ಅಭಿಮಾನಿಗಳು ಕೆಟ್ಟ ಪದ ಬಳಕೆ ಪ್ರಯೋಗ, ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕರಣವನ್ನು ವಿಕ್ಟೋರಿಯಾ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಎಚ್ಚರಿಕೆ ನೀಡಲಾಗಿದ್ದು ಯಾವುದೇ ರೀತಿಯ ಪ್ರಚೋಜನೆ ನೀಡುವ, ನಿಂದಿಸುವ ಮಾತುಗಳನ್ನು ಆಡದಂತೆ ಸೂಚಿಸಲಾಗಿದೆ. ಎಂಸಿಜಿ ಸೌಥರ್ನ್ ಸ್ಟಾಂಡ್ ನಲ್ಲಿದ್ದ ಕೆಲ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.