

ಚೆನ್ನೈ : ಪ್ರಸ್ತುತ ಟೀಂ ಇಂಡಿಯಾ ಬೌಲಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಬೌಲಿಂಗ್ ದಾಳಿ ಮುಂದುವರೆಸಿದ್ದಲ್ಲಿ ಪ್ರತಿ ಟೆಸ್ಟ್ ನಲ್ಲಿ 20 ವಿಕೆಟ್ ಕಬಳಿಸಬಹುದು ಎಂದು ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಬೌಲರ್ ಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಇದೇ ರೀತಿಯ ಪ್ರದರ್ಶನ ನಿರಂತರವಾಗಿ ಮುಂದುವರೆಯಬೇಕು. ಹಾಗೆ ಮುಂದುವರೆದರೆ ಪ್ರತಿ ಟೆಸ್ಟ್ ನಲ್ಲೂ 20 ವಿಕೆಟ್ ಗಳಿಸಬಹುದು .ಪಾಸ್ಟ್ ಬೌಲಿಂಗ್ ಯಾವಾಗಾಲೂ ಸದೃಢವಾಗಿ ಇರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.