ಎಂಎಸ್ ಧೋನಿ
ಕ್ರಿಕೆಟ್
ಧೋನಿ ನೂತನ ವಿಶ್ವ ದಾಖಲೆ: ವಿಕೆಟ್ ಹಿಂದೆ 400 ಔಟ್ ಮಾಡಿರುವ ಏಕೈಕ ಭಾರತೀಯ
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ...
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ವಿಕೆಟ್ ಹಿಂದೆ 400 ಔಟ್ ಮಾಡಿದ ಖ್ಯಾತಿಗೆ ಎಂಎಸ್ ಧೋನಿ ಭಾಜನರಾಗಿದ್ದು ಈ ವಿಶ್ವ ದಾಖಲೆ ಬರೆದ ಏಕೈಕ ಭಾರತೀಯ ಹಾಗೂ ವಿಶ್ವದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್ ಹಿಂದೆ ಅತೀ ಹೆಚ್ಚು ಔಟ್ ಮಾಡಿರುವ ಅಗ್ರ ಆಟಗಾರ ಎಂಬ ಖ್ಯಾತಿಗೆ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಪಾತ್ರರಾಗಿದ್ದಾರೆ. ಸಂಗಕ್ಕಾರ ಒಟ್ಟು 482 ಔಟ್ ಗಳನ್ನು ಮಾಡಿದ್ದಾರೆ. 472 ಔಟ್ ಮಾಡಿ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಗಿಲ್ ಕ್ರಿಸ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 424 ವಿಕೆಟ್ ಪಡೆದಿರುವ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ಮೂರನೇ ಸ್ಥಾನದಲ್ಲಿದ್ದಾರೆ.

