ಇನ್ನು ಇಮ್ರಾನ್ ಖಾನ್ ಅವರು ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಪಕ್ಷದ ವಕ್ತಾರ ಫವಾದ್ ಚೌದರಿ, ಬುಷ್ರಾ ಮನೆತನದ 40 ವರ್ಷದ ಬುಷ್ರಾ ಮನೇಕಾ ಅವರನ್ನು ಇಮ್ರಾನ್ ಖಾನ್ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಮನೇಕಾ ವೃತ್ತಿಯಲ್ಲಿ ಧಾರ್ಮಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.