ಪಾಕ್ ಅಂಡರ್-19 ತಂಡಕ್ಕೂ ದ್ರಾವಿಡ್‌ ಅವರಂತಹ ಕೋಚ್ ಬೇಕು!

ಪಾಕಿಸ್ತಾನ ಅಂಡರ್-19 ತಂಡಕ್ಕೂ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‌ರಂತ ಕೋಚ್ ಅನ್ನು ನೇಮಕ ಮಾಡಬೇಕೆಂದು ಪಾಕಿಸ್ತಾನ ಮಾಜಿ ನಾಯಕ...
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
ಕರಾಚಿ: ಪಾಕಿಸ್ತಾನ ಅಂಡರ್-19 ತಂಡಕ್ಕೂ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‌ರಂತ ಕೋಚ್ ಅನ್ನು ನೇಮಕ ಮಾಡಬೇಕೆಂದು ಪಾಕಿಸ್ತಾನ ಮಾಜಿ ನಾಯಕ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ. 
ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರಂತ ಶ್ರೇಷ್ಠ ಟೆಸ್ಟ್ ಆಟಗಾರರನ್ನೇ ಪಾಕಿಸ್ತಾನ ತನ್ನ ಕಿರಿಯರ ತಂಡಕ್ಕೆ ನೇಮಕ ಮಾಡಬೇಕಿದೆ ಎಂದು ರಮೀಜ್ ರಾಜಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಸಲಹೆ ನೀಡಿದ್ದಾರೆ. 
ಟೀಂ ಇಂಡಿಯಾ ಈಗಲೇ ತನ್ನ ಕಿರಿಯರ ತಂಡಕ್ಕೆ ದ್ರಾವಿಡ್ ರನ್ನು ಕೋಚ್ ಆಗಿ ನೇಮಕ ಮಾಡಿ ಭವಿಷ್ಯಕ್ಕೆ ಅತ್ಯುತ್ತಮ ಆಟಗಾರರರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ. ಅದೇ ರೀತಿ ಪಾಕಿಸ್ತಾನ ಕೂಡ 16, 19 ವಯೋಮಿತಿಯಲ್ಲೇ ಇಂಥ ಬೆಂಬಲ ನೀಡಬೇಕಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com