ಕ್ರಿಕೆಟ್

ಆಫ್ಘಾನ್ ಆತಿಥೇಯತ್ವದ ಪಂದ್ಯಗಳಿಗಾಗಿ ಲಖನೌ ಮೈದಾನವನ್ನೇ ಬಿಟ್ಟು ಕೊಟ್ಟ ಬಿಸಿಸಿಐ

ಆಫ್ಘಾನ್ ಆತಿಥೇಯತ್ವದ ಪಂದ್ಯಗಳಿಗಾಗಿ ಲಖನೌ ಮೈದಾನವನ್ನೇ ಬಿಟ್ಟು ಕೊಟ್ಟ ಬಿಸಿಸಿಐ
ಆಫ್ಘಾನಿಸ್ತಾನ
Published On :
ಲಖನೌ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ಲಖನೌದ ಏಕಾನಾ ಕ್ರಿಕೆಟ್ ಮೈದಾನವನ್ನೇ ಬಿಟ್ಟುಕೊಟ್ಟಿದೆ. 
ಆಫ್ಘಾನ್ ಆತಿಥೇಯತ್ವದ ಪಂದ್ಯಗಳು ಇನ್ನು ಮುಂದೆ ಇಲ್ಲೆ ನಡೆಯಲಿವೆ. ಮಂಗಳವಾರ ನಡೆದ ಬಿಸಿಸಿಐ ಹಾಗೂ ಆಫ್ಘಾನಿಸ್ತಾನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಘೋಷಿಸಲಾಗಿದೆ. 
ಭಾರತ-ಆಫ್ಘಾನಿಸ್ತಾನ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ಎರಡೂ ದೇಶಗಳ ರಾಜತಾಂತ್ರಿಕ ಸಂಬಂದ ವೃದ್ಧಿಸುವ ದೃಷ್ಠಿಯಿಂದಲೂ ಇದು ಮಹತ್ವದ್ದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಡಿಸುವಂತಹ ವಾತಾವರಣ ಇಲ್ಲ. ಭಯೋತ್ಪಾದಕರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಅಲ್ಲಿ ಕ್ರಿಕೆಟ್ ಆಯೋಜನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತವನ್ನು ತವರು ಕ್ರೀಡಾಂಗಣವಾಗಿ ಆಫ್ಘಾನಿಸ್ತಾನ ಆಯ್ಕೆ ಮಾಡಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.