ಕ್ವೀನ್ಸ್‌ಟೌನ್: ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಅಜೇಯ ಓಟ ಮುಂದುವರೆಸಿರುವ ಭಾರತ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಕ್ವೀನ್ಸ್‌ಟೌನ್ ಇವೆಂಟ್ಸ್ ಸೆಂಟರ್ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 131 ರನ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದು ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಸೆಣೆಸಲಿದೆ.
ಭಾರತ ಪರ ಪೃಥ್ವಿ ಶಾ 40, ಶುಭ್ಮನ್ ಗಿಲ್ 86, ದೇಸಾಯ್ 34, ಅಭಿಶೇಕ್ ಶರ್ಮಾ 50 ರನ್ ಬಾರಿಸಿದ್ದಾರೆ. ನ್ಯೂಜಿಲೆಂಡ್ ಪರ ಬೌಲಿಂಗ್ ನಲ್ಲಿ ಕ್ವಾಜಿ ಓನಿಕ್ 3, ನಯೀಂ ಹಸನ್ ಮತ್ತು ಸೈಫ್ ಹಸನ್ ತಲಾ 2 ವಿಕೆಟ್ ಪಡೆದಿದ್ದಾರೆ.
ಬಾಂಗ್ಲಾದೇಶ ಪರ ಪಿನಕ್ ಗೋಷ್ 43, ಮೊಹಮ್ಮದ್ ನೈಮ್ 12, ಸೈಫ್ ಹಸನ್ 12 ಮತ್ತು ಅಫಿಫ್ ಹುಸೈನ್ 18 ರನ್ ಬಾರಿಸಿದ್ದಾರೆ. ಭಾರತ ಪರ ಬೌಲಿಂಗ್ ನಲ್ಲಿ ನಾಗರ್ ಕೋಟಿ 3, ಶಿವಂ ಮವಿ ಮತ್ತು ಅಭಿಶೇಕ್ ಶರ್ಮಾ ತಲಾ 2 ವಿಕೆಟ್ ಪಡೆದಿದ್ದಾರೆ.