ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಗೇಯ್ಲ್, ಸೂಪರ್ ಕ್ಯಾಚ್‌ಗೆ ಅಭಿಮಾನಿಗಳು ಫಿದಾ, ವಿಡಿಯೋ ವೈರಲ್!

ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರೀಸ್ ಗೇಯ್ಲ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದಿರುವುದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದೆ...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್
ಟೊರೊಂಟೊ: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರೀಸ್ ಗೇಯ್ಲ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದಿರುವುದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದೆ. 
ಗ್ಲೋಬಲ್ ಟಿ20 ಕೆನಡಾ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ 'ಬಿ' ತಂಡದ ವಿರುದ್ಧ ವ್ಯಾಂಕೋವರ್ ನೈಟ್ಸ್ ತಂಡದ ಪರ ಆಡಿದ್ದ ಗ್ಲೇಯ್ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಕೇವೆಂ ಹಾಡ್ಜ್ ಬಾರಿಸಿದ ಚೆಂಡು ಸ್ಮಿಕ್ ಆಗಿತ್ತು. ಈ ವೇಳೆ ಗೇಯ್ಲ್ ಮೊದಲ ಪ್ರಯತ್ನದಲ್ಲಿ ಚೆಂಡನ್ನು ಕೈಚೆಲ್ಲಿದ್ದರು. ಇನ್ನೇನು ಚೆಂಡು ಕೆಳಗೆ ಬೀಳಬೇಕು ಅಷ್ಟರಲ್ಲಿ ಒಂದೇ ಕೈಯಲ್ಲಿ ಹಿಡಿದಿದ್ದಾರೆ. 
ತಾನೇ ನಿಜವಾದ ಯುನಿವರ್ಸ್ ಬಾಸ್ ಎಂದು ಕರೆದುಕೊಳ್ಳುತ್ತಿರುವ ಕ್ರಿಸ್ ಗೇಯ್ಲ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. 
ವೆಸ್ಟ್ ಇಂಡೀಸ್ ಬಿ ತಂಡವನ್ನು ನೈಟ್ಸ್ ತಂಡ 7 ವಿಕೆಟ್ ಗಳಿಂದ ಮಣಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com