ಕೆಎಲ್ ರಾಹುಲ್, ರಹಾನೆರನ್ನು ಮೂಲೆಗುಂಪು ಮಾಡಿ, ಧೋನಿ ಮೇಲೆ ಒತ್ತಡ ಯಾಕೆ: ಗಂಗೂಲಿ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿರುವ ಮಾಜಿ ನಾಯಕ ಸೌರವ್ ಗಂಗೂಲಿ...
ಕೆಎಲ್ ರಾಹುಲ್, ಎಂಎಸ್ ಧೋನಿ
ಕೆಎಲ್ ರಾಹುಲ್, ಎಂಎಸ್ ಧೋನಿ
Updated on: 
ನವದೆಹಲಿ: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿರುವ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕೆಎಲ್ ರಾಹುಲ್, ರಹಾನೆರನ್ನು ಮೂಲೆಗುಂಪು ಮಾಡಿ, ಎಂಎಸ್ ಧೋನಿ ಮೇಲೆ ಒತ್ತಡ ಹೇರುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. 
ಟೀಂ ಇಂಡಿಯಾದ ಆರಂಭಿಕ ಆಟಗಾರರ ವೈಫಲ್ಯ ಪದೇ ಪದೇ ಎದ್ದು ಕಾಣುತ್ತಿದೆ. ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿರಂತಾ ಬಲಿಷ್ಠ ಬ್ಯಾಟ್ಸ್ ಮನ್ ಗಳಿದ್ದರು. ರನ್ ಹೊಳೆ ಹರಿಯುತ್ತಿಲ್ಲ. ಈ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳೇ ರನ್ ಗಳಿಸುವಲ್ಲಿ ವಿಫಲವಾದರೇ ಮುಂಬರುವ ಆಟಗಾರ ಮೇಲೆ ಒತ್ತಡ ಹೆಚ್ಚಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 
ಆಯ್ಕೆ ಸಮಿತಿ ಕೆಎಲ್ ರಾಹುಲ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿಲ್ಲ. ಮ್ಯಾಂಚೆಸ್ಟರ್ ನಲ್ಲಿ ರಾಹುಲ್ ಭರ್ಜರಿ ಶತಕ ಸಿಡಿಸಿದ್ದರು. ಆದರೂ ಏಕದಿನ ಫೈನಲ್ ಪಂದ್ಯದಲ್ಲಿ ರಾಹುಲ್ ಗೆ ಅವಕಾಶ ನೀಡಲಿಲ್ಲ. ರಾಹುಲ್ ಹಾಗೂ ರಹಾನೆ ಅದ್ಭುತ ಬ್ಯಾಟ್ಸ್ ಮನ್ ಗಳು. ಅವರಿಗೆ ನಾಲ್ಕನೇ ಹಾಗೂ ಐದನೇ ಕ್ರಮಾಂಕದಲ್ಲಿ ಇಳಿಸಬಹುದು. ಇನ್ನು ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ಧೋನಿಗೆ ಅವಕಾಶ ನೀಡಬಹುದು. ಇನ್ನು ಏಳನೇ ಕ್ರಮಾಂಕಕ್ಕೆ ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದಾರೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com