ಭಾರತ ಕೊನೆಯ ಎಸೆತದಲ್ಲಿ ಬಾಂಗ್ಲಾವನ್ನು ಬಗ್ಗುಬಡಿದಂತೆ ಆಫ್ಘಾನ್ ಸಹ ರೋಚಕ ಗೆಲುವು ಸಾಧಿಸಿದೆ!
ನಿದಾಹಾಸ್ ಟಿ20 ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶವನ್ನು ಟೀಂ ಇಂಡಿಯಾ ಬಗ್ಗುಬಡಿದಂತೆ ಆಫ್ಘಾನಿಸ್ತಾನ ಸಹ ಬಾಂಗ್ಲಾದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿದೆ...
ಡೆಹ್ರಾಡೂನ್: ನಿದಾಹಾಸ್ ಟಿ20 ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶವನ್ನು ಟೀಂ ಇಂಡಿಯಾ ಬಗ್ಗುಬಡಿದಂತೆ ಆಫ್ಘಾನಿಸ್ತಾನ ಸಹ ಬಾಂಗ್ಲಾದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿದೆ.
ಟೀಂ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಅಂತೆ ನಿನ್ನೆ ನಡೆದ ಬಾಂಗ್ಲಾ ಹಾಗೂ ಆಫ್ಘಾನ ತಂಡಗಳ ನಡುವಿನ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ ಕೊನೆಯ ಎಸೆತ ಬಾಂಗ್ಲಾದೇಶದ ಆಟಗಾರನನ್ನು ಔಟ್ ಮಾಡುವ ಮೂಲಕ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶಕ್ಕೆ ಗೆಲ್ಲಲು 8 ರನ್ ಗಳ ಅವಶ್ಯಕತೆ ಇತ್ತ. ಈ ವೇಳೆ ಬೌಲಿಂಗ್ ಮಾಡಿದ ರಶೀದ್ ಖಾನ್ ಮೊದಲ ಎಸೆತದಲ್ಲೇ ಮುಷ್ಫಿಕರ್ ರಹೀಮ್ ವಿಕೆಟ್ ಪಡೆದರು. ನಂತರ 4 ಎಸೆತದಲ್ಲಿ 5 ರನ್ ನೀಡಿದರು. ಹೀಗಾಗಿ ಕೊನೆಯ ಎಸೆತದಲ್ಲಿ 3 ರನ್ ಬಾರಿಸಬೇಕಿತ್ತು. ಈ ವೇಳೆ ಬೌಂಡರಿಯಲ್ಲಿ ಉತ್ತಮವಾಗಿ ಫೀಲ್ಡಿಂಗ್ ಮಾಡಿ ಚೆಂಡನ್ನು ಥ್ರೋ ಮಾಡಿದ್ದು ಮಹಮ್ಮುದ್ದುಲ್ಲಾ ರನ್ ಔಟ್ ಆಗಿದ್ದು ಆಫ್ಘಾನ್ 1 ರನ್ ನಿಂದ ರೋಚಕ ಗೆಲುವು ಸಾಧಿಸಿತು.
ಸರಣಿಯ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸುವ ಮೂಲಕ ಆಫ್ಘಾನ್ ಬಾಂಗ್ಲಾದೇಶವನ್ನು ವೈಟ್ ವಾಶ್ ಮಾಡಿದೆ.
ಆಫ್ಘಾನ್ ಪರ ಮೊಹಮ್ಮದ್ ಶಹಜಾದ 26, ಅಸ್ಘರ್ 27, ಸೈಮುಲ್ಲಾ 33 ರನ್ ಬಾರಿಸಿದ್ದಾರೆ. ಬಾಂಗ್ಲಾ ಪರ ಮುಷ್ಫಿಕರ್ ರಹೀಮ್ 46, ಮಹಮ್ಮುದುಲ್ಲಾ 45 ರನ್ ಗಳಿಸಿದ್ದಾರೆ.