ಭರ್ಜರಿ ಸಿಕ್ಸರ್ ಬಾರಿಸಿದರು ಔಟಾದ ಬ್ಯಾಟ್ಸ್ ಮನ್!

ಕ್ರಿಕೆಟ್ ನಲ್ಲಿ ಎಂತಹ ವಿಚಿತ್ರ ಸಂಗತಿಗಳು ನಡೆಯುತ್ತದೆ ಎಂಬುದಕ್ಕೆ ಇದು ಘಟನೆ ಉದಾಹರಣೆ...
ಅನ್ವರ್ ಅಲಿ
ಅನ್ವರ್ ಅಲಿ
ಕ್ರಿಕೆಟ್ ನಲ್ಲಿ ಎಂತಹ ವಿಚಿತ್ರ ಸಂಗತಿಗಳು ನಡೆಯುತ್ತದೆ ಎಂಬುದಕ್ಕೆ ಇದು ಘಟನೆ ಉದಾಹರಣೆ. 
ಪಾಕಿಸ್ತಾನ ಸೂಪರ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಕ್ವೆಟ್ಟಾ ತಂಡದ ಆಟಗಾರ ಅನ್ವರ್ ಅಲಿ ಪೇಶಾವರ್ ತಂಡ ಬೌಲರ್ ರಿಯಾಜ್ ಬೌಲಿಂಗ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುತ್ತಾರೆ. ಆದರೆ ದುರಾದುಷ್ಟವಶಾತ್ ಸಿಕ್ಸರ್ ಬಾರಿಸುವಾಗ ಅನ್ವರ್ ಹಿಂದಕ್ಕೆ ಬಂದಿದ್ದರಿಂದ ಕಾಲು ವಿಕೆಟ್ ಗೆ ತಾಗಿ ಬೇಲ್ಸ್ ಬೀಳುತ್ತದೆ. 
 ಭರ್ಜರಿ ಸಿಕ್ಸರ್ ಬಾರಿಸಿದ್ದ ಅನ್ವರ್ ಇದನ್ನು ಗಮನಿಸಿರುವುದಿಲ್ಲ ಆದರೆ ಪೇಶಾವರದ ವಿಕೆಟ್ ಕೀಪರ್ ಇದನ್ನು ಗಮನಿಸಿ ಔಟ್ ಅಪೀಲ್ ಮಾಡುತ್ತಾರೆ. ನಂತರ ಇಬ್ಬರು ಮೈದಾನ ಅಂಪೈರ್ ಗಳು ಚರ್ಚಿಸಿ ಔಟ್ ಎಂದು ತೀರ್ಪು ನೀಡುತ್ತಾರೆ. ಸಿಕ್ಸರ್ ಸಿಡಿಸಿದ್ದ ಅನ್ವರ್ ತಮ್ಮ ತಪ್ಪಿನಿಂದಾಗಿ ಔಟಾಗಿದ್ದಕ್ಕೆ ಬೇಸರದಿಂದ ಪೆವಿಲಿಯನ್ ಸೇರಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com