ಪಾಕ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ಆಡಲಿ ಅಂದವರಿಗೆ ಭಾರತೀಯರು ಕೊಟ್ಟ ತಿರುಗೇಟು!

ಟೀಂ ಇಂಡಿಯಾದ ನಾಯಕ, ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲಡೆ ಅಭಿಮಾನಿಗಳಿದ್ದಾರೆ. ಅಂತೆಯೇ ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ನಾಯಕ, ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲಡೆ ಅಭಿಮಾನಿಗಳಿದ್ದಾರೆ. ಅಂತೆಯೇ ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. 
ಅಂತಹ ಅಭಿಮಾನಿಯೊಬ್ಬ ಪಾಕಿಸ್ತಾನ ಸೂಪರ್ ಲೀಗ್ ವೇಳೆ ಅಭಿಮಾನಿಯೊಬ್ಬ ವಿ ವಾಂಟು ಟು ಸಿ ಕೊಹ್ಲಿ ಫ್ಲೇಯಿಂಗ್ ಪಿಎಸ್ಎಲ್ ಎಂದು ಬರೆದು ಫಲಕ ಹಿಡಿದಿದ್ದಾನೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಕೊಹ್ಲಿ ಬಂದು ಇಲ್ಲಿ ಆಡಲಿ ಎನ್ನುವ ಪ್ರಕಟಣೆಗಳನ್ನು ಹಾಕಿಕೊಂಡಿದ್ದಾರೆ. ಇದಕ್ಕೆ ಕೆಲ ಟ್ವೀಟರಿಗರು ಅಷ್ಟು ಮೊತ್ತಕ್ಕೆ ಮಾರಾಟವಾಗಬಲ್ಲ ವಿಶ್ವದ ಶ್ರೀಮಂತ ಕ್ರಿಕೆಟಿಗ ನಿಮ್ಮ ಪಿಎಸ್ಎಲ್ ನಲ್ಲಿ ಆಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. 
ಇನ್ನು ಕೆಲವರು ವಿರಾಟ್ ಕೊಹ್ಲಿಯನ್ನು ಖರೀದಿಸುವಷ್ಟು ಹಣ ನಿಮ್ಮಲ್ಲಿ ಇದೆಯೇ ಎಂದು ಕೇಳಿದ್ದಾರೆ. ಒಟ್ಟಿನಲ್ಲಿ ಪಾಕ್ ಲೀಗ್ ನಲ್ಲಿ ಕೊಹ್ಲಿ ಆಡಬೇಕು ಎಂಬ ಅಂಶ ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಫ್ರಾಂಚೈಸಿ 17 ಕೋಟಿ ರುಪಾಯಿ ಕೊಟ್ಟು ತಂಡದಲ್ಲೇ ಉಳಿಸಿಕೊಂಡಿದೆ. ಇನ್ನು ಬಿಸಿಸಿಐ ನಿಯಮ ಪ್ರಕಾರ ಐಪಿಎಲ್ ಆಟಗಾರನ ಗರಿಷ್ಠ ಮೊತ್ತ 15 ಕೋಟಿ ರುಪಾಯಿ ಆಗಿದ್ದರು. ಆರ್ಸಿಬಿ ಮಾತ್ರ ಕೊಹ್ಲಿಗೆ 17 ಕೋಟಿ ರುಪಾಯಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com