ಕನ್ನಡಿಗ ಮನೀಷ್- ದಿನೇಶ್ ಕಾರ್ತಿಕ್ ಸಾಹಸ
ಇನ್ನು ಇಂದಿನ ಗೆಲುವಿನಲ್ಲಿ ಕನ್ನಡಿಗ ಮನೀಷ್ ಪಾಂಡೆ ಹಾಗೂ ದಿನೇಶ್ ಕಾರ್ತಿಕ್ ಅವರ ಸಮಯೋಚಿತ ಬ್ಯಾಟಿಂಗ್ ನಿರ್ಣಾಯಕ ಪಾತ್ರವಹಿಸಿತು. ಭಾರತ 3.1 ಓವರ್‌ಗಳಲ್ಲಿ 22 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ರೋಹಿತ್ ಶರ್ಮ(11)ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ವಿಫಲರಾದರು. ರಿಷಭ್ ಪಂತ್ ಬದಲಿಗೆ ಅವಕಾಶ ಪಡೆದಿದ್ದ ಕೆ.ಎಲ್. ರಾಹುಲ್(18) ಹಾಗೂ ಸುರೇಶ್ ರೈನಾ(27)3ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಧಾರವಾಗಿ ನಿಂತರು. ಆದರೆ ರೈನಾರನ್ನು ಔಟ್ ಮಾಡಿದ ಫೆರ್ನಾಂಡೊ ಭಾರತಕ್ಕೆ ಮತ್ತೆ ಆಘಾತ ನೀಡಿದರು.
ತಂಡ 85 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಪಾಂಡೆ(42,31 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕಾರ್ತಿಕ್(ಅಜೇಯ 39,25 ಎಸೆತ, 5 ಬೌಂಡರಿ)5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಲಂಕಾ ಪರ ಅಖಿಲಾ ಧನಂಜಯ 2 ವಿಕೆಟ್ ಗಳಿಸಿದರೆ, ಪ್ರದೀಪ್ ಮತ್ತು ನುವಾನ್ ಮೆಂಡಿಸ್ ತಲಾ 1 ವಿಕೆಟ್ ಪಡೆದರು. ಭಾರತದ ಪರ ಬೌಲಿಂಗ್ ನಲ್ಲಿ ಲಂಕಾದ 4 ಪ್ರಮುಖ ವಿಕೆಟ್ ಪಡೆದ ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.