ಬಳಿಕ ಬಂದ ಕುಶಾಲ್ ಪೆರೇರಾ ಕೇವಲ 3 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಸಿಯನ್ ಸೇರಿಕೊಂಡರು. ಈ ಹಂತದಲ್ಲಿ ಲಂಕಾ ತಂಡ ಕೊಂಚ ಒತ್ತಡಕ್ಕೆ ಒಳಗಾಯಿತಾದರೂ, ಬಳಿಕ ಬಂದ ಉಪುಲ್ ತರಂಗಾ ತಾಳ್ಮೆಯ ಆಟ ಪ್ರದರ್ಶನ ಮಾಡುವ ಮೂಲಕ ಲಂಕಾ ರನೇ ವೇಗ ಹೆಚ್ಚಿಸಿದರು. ಮತ್ತೊಂದು ತುದಿಯಲ್ಲಿದ್ದ ಕುಶಾಲ್ ಮೆಂಡಿಸ್ ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ಲಂಕಾ ರನ್ ವೇಗ ಹೆಚ್ಚಿಸಿದರು. ಈ ಹಂತದಲ್ಲಿ ಕುಶಾಲ್ ಮೆಂಡಿಸ್ ಕೇವಲ 38 ಎಸೆತಗಳಲ್ಲಿ 58 ರನ್ ಸಿಡಿಸಿ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಉಪುಲ್ ತರಂಗಾ 22 ರನ್ ಗಳಿಸಿ ವಿಜಯ್ ಶಂಕರ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಅವರ ಬೆನ್ನಲ್ಲೇ ಕ್ರೀಸ್ ಗೆ ಆಗಮಿಸಿದ್ದ ತಿಸರಾಪರೇರಾ 15 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 55 ರನ್ ಗಳಿಸಿದ್ದ ಕುಶಾಲ್ ಮೆಂಡಿಸ್ ಕೂಡ ಚಾಹಲ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಸುಲಭದ ಕ್ಯಾಚ್ ನೀಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.