ಕ್ರಿಕೆಟ್

ಮೈದಾನದಲ್ಲಿ ಅನುಚಿತ ವರ್ತನೆ ತೋರಿಸಿ ನಂತರ ಬ್ಯಾಟ್ಸ್‌ಮನ್‌ ಕ್ಷಮೆ ಕೇಳಿದ ಆಫ್ರಿದಿ

ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಆಟಗಾರ ಸೈಫ್ ಬಾಬಾರ್ ವಿಕೆಟ್ ಪಡೆದ ಶಾಹೀದ್ ಆಫ್ರಿದಿ ಡ್ರೆಸ್ಸಿಂಗ್ ರೂಂ ಅಲ್ಲಿದೆ...

ಮೈದಾನದಲ್ಲಿ ಅನುಚಿತ ವರ್ತನೆ ತೋರಿಸಿ ನಂತರ ಬ್ಯಾಟ್ಸ್‌ಮನ್‌ ಕ್ಷಮೆ ಕೇಳಿದ ಆಫ್ರಿದಿ
ಶಾಹೀದ್ ಆಫ್ರಿದಿ
Published On :
ದುಬೈ: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಆಟಗಾರ ಸೈಫ್ ಬಾಬಾರ್ ವಿಕೆಟ್ ಪಡೆದ ಶಾಹೀದ್ ಆಫ್ರಿದಿ ಡ್ರೆಸ್ಸಿಂಗ್ ರೂಂ ಅಲ್ಲಿದೆ ಹೋಗು ಎಂದು ಬಾಬರ್ ಗೆ ಕೈ ತೋರಿಸಿ ಅನುಚಿತವಾಗಿ ವರ್ತಿಸಿದ್ದಾರೆ. 
ಮೈದಾನದಲ್ಲಿ ಆಟಗಾರರು ಕೆಲವೊಮ್ಮೆ ಅನುಚಿತವಾಗಿ ವರ್ತಿಸುವುದು ಸಹಜ. ಆದರೆ ಕೆಲವೊಂದು ಇದು ಅತೀರೆಕಕ್ಕೆ ಹೋದಾಗ ಅವರ ದುರ್ವತನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತದೆ. 
ಮೈದಾನದಲ್ಲಿ ತಾವು ನಡೆದುಕೊಂಡಿದ್ದರಿಂದ ಬೇಸರಗೊಂಡ ಮಾಜಿ ಪಾಕ್ ಆಟಗಾರ ಶಾಹೀದ್ ಆಫ್ರಿದಿ ಟ್ವೀಟರ್ ನಲ್ಲಿ ಬಾಬರ್ ಕ್ಷಮೆ ಕೇಳಿದ್ದಾರೆ. ಬಾಬರ್ ನನ್ನನ್ನು ಕ್ಷಮಿಸು. ಆ ವೇಳೆ ನಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯಲಿಲ್ಲ. ನಾನು ನಮ್ಮ ಯುವ ಪಡೆಯನ್ನು ಬೆಂಬಲಿಸುತ್ತೇನೆ. ಗುಡ್ ಲಕ್ ಎಂದು ಟ್ವೀಟ್ ಮಾಡುವ ಮೂಲಕ ಆಫ್ರಿದಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ. 
ಶಾಹೀದ್ ಆಫ್ರಿದಿ ಅವರ ಟ್ವೀಟ್ ಇದೀಗ ವೈರಲ್ ಆಗಿದ್ದು ನೆಟಿಜೆನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಆಫ್ರಿದಿ ಮೂರು ವಿಕೆಟ್ ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.