ನವದೆಹಲಿ: ಗಾಯದ ಸಮಸ್ಯೆಗೆ ತುತ್ತಾಗಿರುವ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಿಂದ ಹೊರಬಿದ್ದಿದ್ದು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಹಿನ್ನಡೆಯಾಗಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಆಘಾತ ಎದುರಾಗಿದೆ. ಬಲಗಾಲಿನ ನೋವಿಗೆ ತುತ್ತಾಗಿರುವ ಸ್ಟಾರ್ಕ್ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೂ ಅಲಭ್ಯವಾಗಿದ್ದರು.
ಮಿಚೆಲ್ ಸ್ಟಾರ್ಕ್ ಗೆ ಕೆಕೆಆರ್ ತಂಡ ಬರೋಬ್ಬರಿ 9.4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಐಪಿಎಲ್ ನಲ್ಲಿ 27 ಪಂದ್ಯಗಳನ್ನು ಆಡಿರುವ ಸ್ಟಾರ್ಕ್ 34 ವಿಕೆಟ್ ಗಳನ್ನು ಕಬಳಿಸಿದ್ದಾರೆ.