ಟೂರ್ನಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಖ್ಯಾತ ಪಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳು, ನಿನ್ನೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಗ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಪಡೆಯ ರನ್ ವೇಗಕ್ಕೆ ಕಡಿವಾಣ ಹಾಕಲು ಅಕ್ಷರಶಃ ಪರದಾಡಿದ್ದರು. ಪ್ರಮುಖವಾಗಿ ರನ್ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಪಡೆಯುತ್ತಿದ್ದ ಬಸಿಲ್ ಥಂಪಿ, ಆರ್ ಸಿಬಿ ಆಟಗಾರರಿಂದ ನಿಜಕ್ಕೂ ಆಕ್ರಮಣಕ್ಕೊಳಗಾಗಿದ್ದರು.