ಕೊಹ್ಲಿ ಕುತ್ತಿಗೆಗೆ ಗಾಯ, ಕೌಂಟಿ ಕ್ರಿಕೆಟ್ ನಿಂದ ದೂರ ಉಳಿದ ಟೀಂ ಇಂಡಿಯಾ ನಾಯಕ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ವಿರಾಟ್ ಕೊಹ್ಲಿ ಕೌಂಂಟಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ಜಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ವಿರಾಟ್ ಕೊಹ್ಲಿ ಕೌಂಂಟಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ಜಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಬಿಸಿಸಿಐ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಚಿಕಿತ್ಸೆ ನಿಮಿತ್ತ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ. ಕೊಹ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಸರ್ರೆ ತಂಡದ ಪರ ಆಯ್ಕೆಯಾಗಿರುವ ಕೊಹ್ಲಿ ಇಲ್ಲಿ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಆದರೆ ಪ್ರಸ್ತುತ ಕುತ್ತಿಗೆ ನೋವಿನಿಂದಾಗಿ ಅವರು ಈ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುಂತಾಗಿದೆ. ಇದೇ ಜೂನ್ 2ರಿಂದ ಇಂಗ್ಲೆಂಡ್ ನಲ್ಲಿ ಕೌಂಟಿ ಟೆಸ್ಟ್ ಕ್ರಿಕೆಟ್ ಸರಣಿ ಆರಂಭವಾಗಲಿದೆ.
ಐಪಿಎಲ್ ಟೂರ್ನಿ ಬಳಿಕ ಆಫ್ಘಾನಿಸ್ತಾನ ವಿರುದ್ಧ ಏಕೈಕ ಐತಿಹಾಸಿಕ ಟೆಸ್ಟ್, ಐರ್ಲೆಂಡ್ ಪ್ರವಾಸ, ಕೌಂಟಿ ಕ್ರಿಕೆಟ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿರುವಂತೆಯೇ ಇತ್ತ ನಾಯಕ ವಿರಾಟ್ ಕೊಹ್ಲಿ ಕುತ್ತಿಗೆ ನೋವಿಗೆ ತುತ್ತಾಗಿರುವುದು ಅಭಿಮಾನಿಗಳಲ್ಲಿ ಅತಂಕ ಮೂಡಿಸಿದೆ.  ಕೊಹ್ಲಿ ಕುತ್ತಿಗೆ ನೋವಿನಿಂದಾಗಿ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.  ಜೈಪುರದಲ್ಲಿ ನಡೆದ ತನ್ನ ಕೊನೆಯ ಐಪಿಎಲ್ ಪಂದ್ಯದ ವೇಳೆ ಆರ್ ಸಿಬಿ ನಾಯಕ ಕೊಹ್ಲಿ ಕುತ್ತಿಗೆ ನೋವಿಗೆ ತುತ್ತಾಗಿದ್ದರು. ಬಳಿಕ ತಂಡ ಫಿಸಿಯೋ ಚಿಕಿತ್ಸೆ ನೀಡಿದ್ದರಾದರೂ, ಮುಂಜಾಗ್ರತಾ ಕ್ರಮವಾಗಿ ಕೊಹ್ಲಿ ಮುಂಬೈ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಕೊಹ್ಲಿಗೆ ಸ್ಲಿಪ್ ಡಿಸ್ಕ್ ಆಗಿಲ್ಲ, ಕುತ್ತಿಗೆ ನೋವು ಮಾತ್ರ ಬಿಸಿಸಿಐ ಸ್ಪಷ್ಟನೆ
ಇನ್ನು ಈ ಹಿಂದೆ ಕೊಹ್ಲಿ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯನ್ನು ಅಲ್ಲಗಳೆದಿರುವ ಬಿಸಿಸಿಐ ಅಧಿಕಾರಿಯೊಬ್ಬರು ಅವರಿಗೆ ಸ್ಲಿಪ್ ಡಿಸ್ಕ್ ಆಗಿಲ್ಲ. ಕುತ್ತಿಗೆ ಭಾಗದ ನೋವಿನಿಂದ ಬಳಲುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. 
ಅಂತೆಯೇ ವೈದ್ಯರು ಪ್ರಸ್ತುತ ಕೊಹ್ಲಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದು, ಜೂನ್ 15ರಿಂದ ಎನ್ ಸಿಎದಲ್ಲಿ ನಡೆಯುವ ಅಭ್ಯಾಸದಲ್ಲಿ ಕೊಹ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ಪ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಕ್ರಿಕೆಟಿಗ ಕೊಹ್ಲಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಫಿಟ್ನೆಸ್ ಸವಾಲು ಸ್ವೀಕರಿಸಿದ್ದರು. ಅಲ್ಲದೆ ಪ್ರಧಾನಿ ಮೋದಿ, ಪತ್ನಿ ಅನುಷ್ಕಾಗೂ ಫಿಟ್ನೆಸ್ ಸಾವಾಲು ನೀಡಿದ್ದರು. 2017ರಿಂದ ಇಲ್ಲಿಯವರೆಗೂ ಕೊಹ್ಲಿ 9 ಟೆಸ್ಚ್ ಪಂದ್ಯಗಳನ್ನಾಡಿದ್ದು, 29 ಏಕದಿನ ಮತ್ತು 18 ಟಿ20 ಪಂದ್ಯಗಳನ್ನಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com