ತಮ್ಮ ಹತ್ತಿರಕ್ಕೆ ಬಂಧ ಧೋನಿ ಪುಟ್ಟ ಅಭಿಮಾನಿ ಕೈಗೆ ಮುತ್ತು ನೀಡಲು ಕೇಳುತ್ತಾರೆ. ಕ್ಷಣ ಮಾತ್ರ ಏನೂ ಯೋಚಿಸದ ಧೋನಿ ಮುತ್ತು ಪಡೆಯುತ್ತಾರೆ. ಬಳಿಕ ಅಭಿಮಾನಿಯೊಂದಿಗೆ ಕೆಲ ಸಮಯ ಮಾತನಾಡಿದ ಧೋನಿ ಫೋಟೋಗೆ ಫೋಸ್ ನೀಡಿ, ಆಟೋಗ್ರಾಫ್ ನೀಡಿ ತೆರಳಿದ್ದಾರೆ. ಇದನ್ನು ಮತ್ತೊಮ್ಮ ಅಭಿಮಾನಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದು ಧೋನಿ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ.