ಈ ಮಧ್ಯೆ ರಿಷಬ್ ಪಂತ್ 63 ರನ್ ಗಳಿಸಿದ್ದಾಗ ಚೇಸ್ ಎಸೆತದಲ್ಲಿ ಚೆಂಡನ್ನು ಎದುರಿಸಿದರು. ಆದರೆ ಚೆಂಡು ಬ್ಯಾಟ್ ಗೆ ತಲುಗಿ ವಿಕೆಟ್ ಕಡೆ ತೆರಳಿದ್ದರಿಂದ ಔಟಾಗುವ ಭಯದಿಂದ ಮತ್ತೊಮ್ಮೆ ರಿಷಬ್ ಚೆಂಡನ್ನು ಹೊಡೆಯಲು ಮುಂದಾದರೂ ಆದರೆ ಅದು ಸಫಲವಾಗಿಲ್ಲ. ಅದೃಷ್ಟವೆಂಬಂತೆ ಚೆಂಡು ಸಹ ವಿಕೆಟ್ ಕೆ ಬಡಿಯಲಿಲ್ಲ. ಅಂತು ಒಂದು ಚೆಂಡನ್ನು ಎರಡೆರಡು ಬಾರಿ ಹೊಡೆಯಲು ಮುಂದಾದ ರಿಷಬ್ ರ ಕೆಲಸ ಮಾತ್ರ ಹಾಸ್ಯಾತ್ಮಕವಾಗಿತ್ತು.