ಹೈದರಾಬಾದ್: ಕೊಹ್ಲಿ ಜೊತೆ ಸೆಲ್ಫೀಗಾಗಿ ಆಟದ ಮಧ್ಯೆಯೇ ಮೈದಾನಕ್ಕೆ ನುಗ್ಗಿದ ಅಭಿಮಾನಿ

ಮೈದಾನಕ್ಕೆ ನುಗ್ಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ...
ಸೆಲ್ಫೀ ವಿತ್ ವಿರಾಟ್ ಕೊಹ್ಲಿ: ಭದ್ರತಾ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಮೈದಾನಕ್ಕೆ ಬಂದ ಅಭಿಮಾನಿ
ಸೆಲ್ಫೀ ವಿತ್ ವಿರಾಟ್ ಕೊಹ್ಲಿ: ಭದ್ರತಾ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಮೈದಾನಕ್ಕೆ ಬಂದ ಅಭಿಮಾನಿ
Updated on
ಹೈದರಾಬಾದ್: ಮೈದಾನಕ್ಕೆ ನುಗ್ಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ. 
ರಾಜಕೋಟ್'ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ 2ನೇ ಟೆಸ್ಟ್'ನ ಮೊದಲ ದಿನದ ಆಟ ನಡೆಯುತ್ತಿರುವಾಗಲೇ ಭದ್ರತಾ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿರುವ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಕೊಹ್ಲಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಘಟನೆ ನಡೆದಿದೆ. 
ಮ್ಯಾಚ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಬ್ಯಾರಿಕೇಡ್ ಎಗರಿ 70 ಮೀಟರ್ ಗಳ ವರೆಗೂ ಬಂದು ಕೊಹ್ಲಿಯವರನ್ನು ಬಿಗಿದಪ್ಪಿಕೊಂಡು ನಂತರ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾನೆ. 
ಅಭಿಮಾನಿ ಹತ್ತಿರ ಬರುತ್ತಿರುವುದನ್ನು ಕಂಡ ಕೊಹ್ಲಿ ಆತನಿಂದ ದೂರ ಉಳಿಯಲು ಯತ್ನಿಸಿದ್ದಾರೆ. ಬಳಿಕ ಸೆಲ್ಫೀಗೆ ಫೋಸ್ ನೀಡಿದ್ದಾರೆ. ಇದಾದ ಬಳಿಕ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. 
ಇದೇ ರೀತಿಯ ಘಟನೆ ಮೊದಲನೇ ಟೆಸ್ಟ್ ನಲ್ಲಿಯೂ ನಡೆದಿತ್ತು. ಪಿಚ್ ಬಳಿಗೆ ತೆರಳಿದ ಅಭಿಮಾನಿಗಳು ಕೊಹ್ಲಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಗಳು ಅಭಿಮಾನಿಗಳನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com