ಕಳೆದ ಏಷ್ಯಾ ಕಪ್ ನಲ್ಲಿ ಗಾಯಗೊಂಡು ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯರ ಪ್ರದರ್ಶನದ ಕುರಿತಂತೆ ಕ್ರಿಕೆಟ್ ದಿಗ್ಗಜರಾದ ಸುನೀಲ್ ಗವಾಸ್ಕರ್ ಹಾಗೂ ಮೈಕೆಲ್ ಹೊಲ್ಡಿಂಗ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಾಂಡ್ಯ ನನ್ನ ಬಗ್ಗೆ ಟೀಕಿಸುವವರು ಎಷ್ಟು ಬೇಕಾದರೂ ಮಾತನಾಡಲಿ. ಅವರು ಮಾಡುವ ಟೀಕೆಗೆ ನಾನು ಯೋಗ್ಯನೆ ಎಂದಿದ್ದಾರೆ.