ನಾನು ಬಿಸಿ ರಕ್ತದ ಯುವಕ; ತನ್ನನ್ನು 'ಓಲ್ಡ್' ಎಂದು ಹೀಯಾಳಿಸಿದವರಿಗೆ ಯುವರಾಜ್ ಸಿಂಗ್ ತಿರುಗೇಟು!

ಟೀಂ ಇಂಡಿಯಾದ ಭರ್ಜರಿ ಸಿಕ್ಸರ್ ಗಳ ಸರದಾರ ಯುವರಾಜ್ ಸಿಂಗ್ ಕೆಲ ವರ್ಷಗಳಿಂದ ತಂಡದಿಂದ ದೂರ ಉಳಿದಿದ್ದು ಫಿಟೆನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ...
ಯುವರಾಜ್ ಸಿಂಗ್
ಯುವರಾಜ್ ಸಿಂಗ್
Updated on: 
ಮುಂಬೈ: ಟೀಂ ಇಂಡಿಯಾದ ಭರ್ಜರಿ ಸಿಕ್ಸರ್ ಗಳ ಸರದಾರ ಯುವರಾಜ್ ಸಿಂಗ್ ಕೆಲ ವರ್ಷಗಳಿಂದ ತಂಡದಿಂದ ದೂರ ಉಳಿದಿದ್ದು ಫಿಟೆನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇನ್ನು ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಓಲ್ಡ್ ಎಂದು ಟ್ರೋಲ್ ಮಾಡಿದವರಿಗೆ ಯುವಿ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. 
ಈ ಕುರಿತು ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಕಳೆದ ವರ್ಷ ತಮ್ಮನ್ನು ಓಲ್ಡ್ ಎಂದು ಟೀಕಿಸಿದ್ದರು. ಅದಕ್ಕೆ ನನ್ನು ಹಾಗೇ ಕರೆಯಬೇಡಿ. ನನ್ನ ಗುರಿ ಮುಟ್ಟಲು ನಾನು ಸದಾ ಪ್ರಯತ್ನಿಸುತ್ತೇನೆ. ಸದ್ಯ ನಾನು ಹೊಸ ಇನ್ನಿಂಗ್ಸ್ ಆರಂಭಿಸಿ ಪ್ರಯತ್ನಿಸುತ್ತಿದ್ದೇನೆ ಎಂದರು. 
ಇದೇ ವೇಳೆ ಕಲಿಯುವುದು ಎಂದು ತಡವಾಗುವುದಿಲ್ಲ. ಆದರೆ ಹೊಸತನ್ನು ಸಾಧಿಸಲು ಕಲಿಯಬೇಕಿದೆ ಎಂದು ಹೇಳಿದ್ದಾರೆ. 
36 ವರ್ಷದ ಯುವರಾಜ್ ಸಿಂಗ್ 2017ರ ಜೂನ್ 30ರಂದು ಕೊನೆಯ ಪಂದ್ಯವನ್ನಾಡಿದ್ದರು. ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೇ ಕಳೆದ ಡಿಸೆಂಬರ್ ನಲ್ಲಿ ಯುವಿ ಯೋಯೋ ಟೆಸ್ಟ್ ಪೂರ್ಣಗೊಳಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com