ಬಲಿಷ್ಠ ಪಾಕ್ ತಂಡವನ್ನು ಮಣಿಸಿದ ಬಾಂಗ್ಲಾ, ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ-ಬಾಂಗ್ಲಾ ಹುಲಿಗಳ ಕಾದಾಟ!

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಫೈನಲ್ ಹಂತಕ್ಕೆ ತಲುಪಿದ್ದು ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದ ಬಾಂಗ್ಲಾದೇಶ ಫೈನಲ್ ಗೆ ಲಗ್ಗೆ ಇಟ್ಟಿದ್ದು ನಾಳೆ ಟೀಂ ಇಂಡಿಯಾ...
ಟೀಂ ಇಂಡಿಯಾ-ಬಾಂಗ್ಲಾದೇಶ
ಟೀಂ ಇಂಡಿಯಾ-ಬಾಂಗ್ಲಾದೇಶ
Updated on: 
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಫೈನಲ್ ಹಂತಕ್ಕೆ ತಲುಪಿದ್ದು ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದ ಬಾಂಗ್ಲಾದೇಶ ಫೈನಲ್ ಗೆ ಲಗ್ಗೆ ಇಟ್ಟಿದ್ದು ನಾಳೆ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದೆ. 
ನಿನ್ನೆ ದುಬೈನಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ 37 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಬಾಂಗ್ಲಾ ನೀಡಿದ 239 ರನ್ ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಪಾಕ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಅಷ್ಟೇ ಪೇರಿಸಲು ಸಾಧ್ಯವಾಯಿತು. 
ಬಾಂಗ್ಲಾ ಆಟಗಾರರ ಅತ್ಯುತ್ತಮ ಪ್ರದರ್ಶನ ತಂಡವನ್ನು ಫೈನಲ್ ಹಂತಕ್ಕೆ ತಂದು ನಿಲ್ಲಿಸಿದೆ. ಇನ್ನು ನಾಳೆ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ. 
ಬಾಂಗ್ಲಾ ಪರ ಬ್ಯಾಟಿಂಗ್ ನಲ್ಲಿ ಮುಶ್ಫಿಕರ್ ರಹೀಮ್ 99, ಮಹಮ್ಮದ್ ಮಿಥುನ್ 60 ಮತ್ತು ಮೊಹಮ್ಮದುಲ್ಲಾ 25 ರನ್ ಗಳಿಸಿದ್ದಾರೆ. 
ಪಾಕ್ ಪರ ಬ್ಯಾಟಿಂಗ್ ನಲ್ಲಿ ಇಮಾಮ್ ಉಲ್ ಹಕ್ 83, ಶೋಯಿಬ್ ಮಲಿಕ್ 30 ಮತ್ತು ಆಸೀಫ್ ಅಲಿ 31 ರನ್ ಪೇರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com