ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟಿ20 ವಿಶ್ವಕಪ್ ವರೆಗೂ ರವಿಶಾಸ್ತ್ರಿ ಕೋಚ್ ಆಗಿ ಮುಂದುವರೆಯಲಿ ಎಂದು ತಂಡ ಬಯಸುತ್ತಿದೆ: ಜಹೀರ್ ಖಾನ್

ಮುಂಬರುವ ಟಿ20 ವಿಶ್ವಕಪ್ ವರೆಗೂ ರವಿಶಾಸ್ತ್ರಿ ಅವರೇ ತಂಡದ ಕೋಚ್ ಆಗಿ ಮುಂದುವರೆಯಬೇಕು ಎಂದು ತಂಡದ ಆಟಗಾರರು ಬಯಸುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.

ನವದೆಹಲಿ: ಮುಂಬರುವ ಟಿ20 ವಿಶ್ವಕಪ್ ವರೆಗೂ ರವಿಶಾಸ್ತ್ರಿ ಅವರೇ ತಂಡದ ಕೋಚ್ ಆಗಿ ಮುಂದುವರೆಯಬೇಕು ಎಂದು ತಂಡದ ಆಟಗಾರರು ಬಯಸುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಜಹೀರ್ ಖಾನ್, ಭಾರತ ತಂಡದ ನೂತನ ಕೋಚ್ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ತಂಡದ ಆಟಗಾರರು ಪ್ರಸ್ತುತ ಸಂದರ್ಭದಲ್ಲಿ ರವಿಶಾಸ್ತ್ರಿ ಅವರನ್ನೇ ಕೋಚ್ ಆಗಿ ಮುಂದುವರೆಸುವ ಚಿಂತನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ಟೀಂ ಇಂಡಿಯಾದೊಂದಿಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಈ ಹಿಂದೆ ತಂಡದ ನಿರ್ದೇಶಕಾರಿಗಿ ಕಾರ್ಯ ನಿರ್ವಹಿಸಿದ್ದ ಅವರು, ಬಳಿಕ ಹಂಗಾಮಿ ಕೋಚ್ ಆಗಿ, ಇದೀಗ ಪೂರ್ಣ ಪ್ರಮಾಣದ ಕೋಚ್ ಆಗಿದ್ದಾರೆ. ಪ್ರಸ್ತುತ ಅವರ ಕೋಚ್ ಅವಧಿ ಮುಗಿದಿದೆಯಾದರೂ, ವೆಸ್ಟ್ ಇಂಡೀಸ್ ಪ್ರವಾಸದ ನಿಮಿತ್ತ ಅವರ ಕೋಚ್ ಅವಧಿಯನ್ನು ವಿಸ್ತರಿಸಲಾಗಿದೆ. ರವಿಶಾಸ್ತ್ರಿ ಅವರ ಅಡಿಯಲ್ಲಿ ಆಟಗಾರರು ಸಾಕಷ್ಟು ಸರಣಿಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರ ಕೋಚಿಂಗ್ ಮಾದರಿಗೆ ಆಟಗಾರರು ಒಗ್ಗಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ವರೆಗೂ ಅವರೇ ಕೋಚ್ ಆಗಿ ಮುಂದುವರೆಯಲಿ ಎಂದು ಆಟಗಾರರು ಬಯಸಿದ್ದಾರೆ ಎಂದು ಜಹೀರ್ ಖಾನ್ ಹೇಳಿದ್ದಾರೆ. 

ಇನ್ನು ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ರೇಸ್ ನಲ್ಲಿ ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಕ್ರಿಕೆಟ್ ಲೋಕದ ಘಟಾನುಘಟಿ ದಿಗ್ಗಜ ಆಟಗಾರರು ಇದ್ದಾರೆ. ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟರ್ನ್, ಶ್ರೀಲಂಕಾದ ಮಹೇಲಾ ಜಯವರ್ಧನೆ, ಆಸ್ಟ್ರೇಲಿಯಾದ ಟಾಮ್ ಮೂಡಿ, ಭಾರತದ ವಿರೇಂದ್ರ ಸೆಹ್ವಾಗ್ ಕೋಚ್ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com