ಆರಂಭಿಕ ಆಟಗಾರನಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ, ಟಾಪ್ 10 ಪಟ್ಟಿಯಲ್ಲಿರುವ ಏಕೈಕ ವಿಂಡೀಸ್ ದಾಂಡಿಗ

3ನೇ ಏಕದಿನ ಪಂದ್ಯ: ಗೇಯ್ಲ್ ಭರ್ಜರಿ ಬ್ಯಾಟಿಂಗ್, ಹಲವು ದಾಖಲೆ ಧೂಳಿಪಟ!
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಟ್ರಿನಿಡಾಡ್: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದ ವಿಂಡೀಸ್ ದೈತ್ಯ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಯ್ಲ್ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಟ್ರಿನಿಡಾಡ್ ನ, ಪೋರ್ಟ್ ಆಫ್ ಸ್ಪೈನ್ ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ 3ನೇ ಏಕದಿನ ಪಂದ್ಯ ನಡೆಯುತ್ತಿದ್ದು, ಭಾರತೀಯ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ ಕ್ರಿಸ್ ಗೇಯ್ಲ್ ಕೇವಲ 41 ಎಸೆತಗಳಲ್ಲಿ ಬರೊಬ್ಬರಿ 72 ರನ್ ಸಿಡಿಸಿದರು. ಅವರ ಈ ಅಮೋಘ ಇನ್ನಿಂಗ್ಸ್ ನಲ್ಲಿ 5 ಸಿಕ್ಸರ್ ಮತ್ತು 8 ಬೌಂಡರಿ ಕೂಡ ಸೇರಿತ್ತು.

ಇನ್ನು ಗೇಯ್ಲ್ ಗೆ ಇದು ಸ್ಮರಣೀಯ ಪಂದ್ಯವಾಗಿದ್ದು, ಇದು ಅವರ ಕ್ರಿಕೆಟ್ ವೃತ್ತಿ ಬದುಕಿನ 301ನೇ ಏಕದಿನ ಪಂದ್ಯವಾಗಿದೆ. ಅಂತೆಯೇ ವಿಂಡೀಸ್ ಪರ ಅತೀ ಹೆಚ್ಚು ಏಕದಿನ ಪಂದ್ಯವಾಡಿದ ಮತ್ತು 301 ಪಂದ್ಯಗಳನ್ನಾಡಿದ ಏಕೈಕ ಆಟಗಾರ ಎಂಬ ಕೀರ್ತಿಗೂ ಕ್ರಿಸ್ ಗೇಯ್ಲ್ ಪಾತ್ರರಾಗಿದ್ದಾರೆ. ಅಲ್ಲದೆ ಗೇಯ್ಲ್ ಇದೇ ಪಂದ್ಯದಲ್ಲಿ ವಿಂಡೀಸ್ ಪರ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮತ್ತು 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಅಲ್ಲದೆ ವೇಗದ 4ನೇ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಯೂ ಗೇಯ್ಲ್ ಪಾಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com