301ನೇ ಏಕದಿನ ಪಂದ್ಯ: ಗೇಯ್ಲ್ ಗೆ ಸ್ಮರಣೀಯ ಉಡುಗೊರೆ ನೀಡಿದ ವಿಂಡೀಸ್ ಕ್ರಿಕೆಟ್ ಮಂಡಳಿ

ವಿಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಯ್ಲ್ ಗೆ ಇಂದು ಸ್ಮರಣೀಯ ದಿನವಾಗಿದ್ದು, ಗೇಯ್ಲ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ 301ನೇ ಪಂದ್ಯವನ್ನಾಡುತ್ತಿದ್ದಾರೆ.
ಜೆರ್ಸಿ ನಂಬರ್ 301
ಜೆರ್ಸಿ ನಂಬರ್ 301
Updated on: 

ಟ್ರಿನಿಡಾಡ್: ವಿಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಯ್ಲ್ ಗೆ ಇಂದು ಸ್ಮರಣೀಯ ದಿನವಾಗಿದ್ದು, ಗೇಯ್ಲ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ 301ನೇ ಪಂದ್ಯವನ್ನಾಡುತ್ತಿದ್ದಾರೆ.

ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಲೆಜೆಂಡ್ ಆಟಗಾರನಿಗೆ ಸ್ಮರಣೀಯ ಉಡುಗೊರೆ ನೀಡಿದ್ದು, ಗೇಯ್ಲ್ ಗೆ ಇಂದು ಅವರ ಜೆರ್ಸಿ ನಂಬರ್ ಅನ್ನು ಬದಲಿಸಲಾಗಿದೆ. ಈ ಹಿಂದೆ ಗೇಯ್ಲ್ 45ನೇ ಸಂಖ್ಯೆಯ ಜೆರ್ಸಿ ಬಳಕೆ ಮಾಡುತ್ತಿದ್ದರು. ಆದರೆ ಇಂದು ಗೇಯ್ಲ್ 301ನೇ ಏಕದಿನ ಪಂದ್ಯವನ್ನಾಡುತ್ತಿದ್ದು, ಇದೇ ಕಾರಣಕ್ಕೆ ಈ ಪಂದ್ಯವನ್ನು ಸ್ಮರಣೀಯವಾಗಿಸಲು ಅವರಿಗೂ 301ನೇ ಸಂಖ್ಯೆಯ ಜೆರ್ಸಿ ನೀಡಲಾಗಿದೆ.

ಈ ಕುರಿತಂತೆ ವಿಂಡೀಸ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ವಿಶೇಷ ಪಂದ್ಯಕ್ಕೆ ವಿಶೇಷ ಜೆರ್ಸಿ ಎಂದು ಟ್ವೀಟ್ ಮಾಡಿದೆ. 

ಇನ್ನು ವಿಂಡೀಸ್ ಪರ ಅತ್ಯಂತ ಹೆಚ್ಚು ಏಕದಿನ ಪಂದ್ಯವನ್ನಾಡಿರುವ ಮತ್ತು ವಿಂಡೀಸ್ ಪರ 301 ಏಕದಿನ ಪಂದ್ಯವನ್ನಾಡಿರುವ ಏಕೈಕ ಆಟಗಾರ ಎಂಬ ಕೀರ್ತಿಗೆ ಗೇಯ್ಲ್ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com