ಪಾಂಟಿಂಗ್‌ರ ದಶಕದ ಟೆಸ್ಟ್ ತಂಡದಲ್ಲಿ ಒಬ್ಬನೇ ಭಾರತೀಯ, ಆ ಟೀಂ ಇಂಡಿಯಾ ಆಟಗಾರನೇ ನಾಯಕ!

ಆಸ್ಟ್ರೇಲಿಯಾಗೆ ಮೂರು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ತಮ್ಮ ದಶಕದ ಟೆಸ್ಟ್ ತಂಡ ಪ್ರಕಟಿಸಿದ್ದು ಅದರಲ್ಲೂ ಓರ್ವ ಭಾರತೀಯನಿಗೆ ಅವಕಾಶ ನೀಡಿದ್ದಾರೆ.
ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್
Updated on: 

ಮೆಲ್ಬೋರ್ನ್: ಆಸ್ಟ್ರೇಲಿಯಾಗೆ ಮೂರು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ತಮ್ಮ ದಶಕದ ಟೆಸ್ಟ್ ತಂಡ ಪ್ರಕಟಿಸಿದ್ದು ಅದರಲ್ಲೂ ಓರ್ವ ಭಾರತೀಯನಿಗೆ ಅವಕಾಶ ನೀಡಿದ್ದಾರೆ. 

ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ಆಯ್ಕೆಯಾಗಿರುವ ಒಬ್ಬನೇ ಭಾರತೀಯನಾಗಿದ್ದು ಅಲ್ಲದೆ ತಂಡದ ನಾಯಕ ಸ್ಥಾನವನ್ನು ಪಡೆದಿದ್ದಾರೆ. 

ರಿಕ್ಕಿ ಪಾಂಟಿಂಗ್ ತಮ್ಮ ಟ್ವೀಟರ್ ಖಾತೆಯಲ್ಲಿ ತಂಡವನ್ನು ಪ್ರಕಟಿಸಿದ್ದು ಈ ತಂಡದಲ್ಲಿ ಇಂಗ್ಲೆಂಡ್ ನ ನಾಲ್ಕು ಆಟಗಾರರು ಸ್ಥಾನ ಪಡೆದಿದ್ದಾರೆ. 

ತಂಡದಲ್ಲಿ 
ಡೇವಿಡ್ ವಾರ್ನರ್, ಅಲಸ್ಟೈರ್ ಕುಕ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ(ನಾಯಕ), ಕುಮಾರ ಸಂಗಕ್ಕಾರ(ಕೀಪರ್), ಬೆನ್ ಸ್ಟೋಕ್ಸ್, ಡೇಲ್ ಸ್ಟೈನ್, ನಾಥನ್ ಲಯಾನ್,  ಸ್ಟುವರ್ಟ್ ಬೋರ್ಡ್, ಜೇಮ್ಸ್ ಅಂಡರ್ ಸನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com