ಟಿ20 ಸರಣಿಗೂ ಮುನ್ನ ನ್ಯೂಜಿಲ್ಯಾಂಡ್‌ಗೆ ಸಂಕಷ್ಟ, ಮಾರ್ಟಿನ್ ಗುಪ್ಟಿಲ್ ಸರಣಿಯಿಂದ ಹೊರಕ್ಕೆ!

ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ನ್ಯೂಜಿಲ್ಯಾಂಡ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಟಿ20 ಸರಣಿಗೂ ಮುನ್ನ ಸ್ಫೋಟಕ ಬ್ಯಾಟ್ಸ್ ಮನ್ ಮಾರ್ಟಿನ್ ಗುಪ್ಟಿಲ್...
ಮಾರ್ಟಿನ್ ಗುಪ್ಟಿಲ್
ಮಾರ್ಟಿನ್ ಗುಪ್ಟಿಲ್
Updated on: 
ವೆಲ್ಲಿಂಗ್ಟನ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ನ್ಯೂಜಿಲ್ಯಾಂಡ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಟಿ20 ಸರಣಿಗೂ ಮುನ್ನ ಸ್ಫೋಟಕ ಬ್ಯಾಟ್ಸ್ ಮನ್ ಮಾರ್ಟಿನ್ ಗುಪ್ಟಿಲ್ ಸರಣಿಯಿಂದ ಹೊರಬಿದ್ದಿದ್ದಾರೆ. 
ಹೌದು, ಫೆಬ್ರವರಿ 6ರಿಂದ ನ್ಯೂಜಿಲ್ಯಾಂಡ್ ಹಾಗೂ ಟೀಂ ಇಂಡಿಯಾ ನಡುವೆ ಟಿ20 ಸರಣಿ ಆರಂಭವಾಗಲಿದ್ದು ಗಾಯಗೊಂಡಿದ್ದ ಮಾರ್ಟಿನ್ ಗುಪ್ಟಿಲ್ ಚೇತರಿಸಿಕೊಳ್ಳದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ. 
ಮಾರ್ಟಿನ್ ಗುಪ್ಟಿಲ್ ಬದಲಿಗೆ ಆಲ್ರೌಂಡರ್ ಜಿಮ್ಮಿ ನಿಶಾಮ್ ಟಿ20ಗೆ ಆಯ್ಕೆಯಾಗಿದ್ದಾರೆ. ನಿಶಾಮ್ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಪ್ರತಿನಿಧಿಸಿದ್ದರು. 
ಮೊದಲ ಟಿ20 ಪಂದ್ಯ ಫೆಬ್ರವರಿ 6ರಂದು ವೆಲ್ಲಿಂಗ್ಟನ್ ನಲ್ಲಿ ನಡೆಯಲಿದೆ. 2ನೇ ಟಿ20 ಪಂದ್ಯ ಫೆಬ್ರವರಿ 8ರಿಂದು ಈಡೆನ್ ಪಾರ್ಕ್ ನಲ್ಲಿ ನಡೆಯಲಿದ್ದು ಮೂರನೇ ಟಿ20 ಪಂದ್ಯ ಹಮಿಲ್ಟನ್ ನಲ್ಲಿ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com