ಎಡಗೈ, ಬಲಗೈನಲ್ಲಿ ಒಂದೇ ರೀತಿ ಆ್ಯಕ್ಷನ್: ವಿದರ್ಭ ಬೌಲರ್‌ನಿಂದ ಚಮತ್ಕಾರಿ ಬೌಲಿಂಗ್, ವಿಡಿಯೋ ವೈರಲ್!

ಸಾಮಾನ್ಯವಾಗಿ ಯಾವುದೇ ಬೌಲರ್ ಯಾವುದಾದರೂ ಒಂದು ಕೈನಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿರುತ್ತಾರೆ. ಇಲ್ಲೊಬ್ಬ ಬೌಲರ್ ಎರಡು ಕೈಯಲ್ಲೂ ಬೌಲಿಂಗ್ ಮಾಡುತ್ತಿದ್ದು...
ಅಕ್ಷಯ್ ಕರ್ನೆವಾಲ್
ಅಕ್ಷಯ್ ಕರ್ನೆವಾಲ್
Updated on
ಸಾಮಾನ್ಯವಾಗಿ ಯಾವುದೇ ಬೌಲರ್ ಯಾವುದಾದರೂ ಒಂದು ಕೈನಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿರುತ್ತಾರೆ. ಇಲ್ಲೊಬ್ಬ ಬೌಲರ್ ಎರಡು ಕೈಯಲ್ಲೂ ಬೌಲಿಂಗ್ ಮಾಡುತ್ತಿದ್ದು ಅದು ಒಂದು ರೀತಿಯ ಆ್ಯಕ್ಷನ್ ಇರುವುದು ನಿಜಕ್ಕೂ ಅಪರೂಪ. 
ವಿದರ್ಭ ತಂಡದ ಆಲ್ರೌಂಡರ್ ಅಕ್ಷಯ್ ಕರ್ನೆವಾರ್ ಅಪರೂಪದ ಬೌಲಿಂಗ್ ಆ್ಯಕ್ಷನ್ ಹೊಂದಿರುವ ಬೌಲರ್. ಇರಾನಿ ಕಪ್ ಟೂರ್ನಿಯಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಅಕ್ಷಯ್ ತಮ್ಮ ಬೌಲಿಂಗ್ ಆ್ಯಕ್ಷನ್ ಅನ್ನು ತೋರಿಸಿದ್ದಾರೆ.
ಇನ್ನು ಭಾರತದಲ್ಲಿ ಇಂತಹ ಅಪರೂಪದ ಪ್ರತಿಭೆ ಹೊಂದಿರುವವರ ಪೈಕಿ ಅಕ್ಷಯ್ ಎರಡನೇ ಆಟಗಾರ. ಈ ಹಿಂದೆ ತಮಿಳುನಾಡು ಪ್ರಿಮಿಯರ್ ಲೀಗ್ ನಲ್ಲಿ ವಿಬಿ ಕಂಚಿ ಆಟಗಾರ ಮೊಕಿತ್ ಹರಿಹರನ್ ಈ ರೀತಿಯ ಬೌಲಿಂಗ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು.
ಇನ್ನು ಜಗತ್ತಿನಾದ್ಯಂತ ಕೆಲ ಬೌಲರ್ ಗಳು ಇಂತಹ ಪ್ರತಿಭೆ ಹೊಂದಿದ್ದಾರೆ. ಅವರಲ್ಲಿ ಶ್ರೀಲಂಕಾದ ಕಮಿಂದು ಮೆಂಡಿಸ್, ಪಾಕಿಸ್ತಾನದ ಯಾಸೀರ್ ಜಾನ್ ಮತ್ತು ಹನೀಫ್ ಮೊಹಮ್ಮದ್. ಇಂಗ್ಲೆಂಡ್ ತಂಡದ ಗ್ರಾಹಮ್ ಗೂಚ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com