ವಿಶ್ವಕಪ್ ನಲ್ಲಿ ಧೋನಿ ನಂ.4 ಕ್ರಮಾಂಕದಲ್ಲಿ ಆಡಬೇಕು: ಸುರೇಶ್ ರೈನಾ

2019 ರ ವಿಶ್ವಕಪ್ ನಲ್ಲಿ ಎಂಎಸ್ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮಾರ್ಗದರ್ಶಕರಾಗಿರಲಿದ್ದಾರೆ. ಅಷ್ಟೇ ಅಲ್ಲದೇ ಭಾರತ ವಿಶ್ವಕಪ್ ಗೆದ್ದರೆ ಅದರಲ್ಲಿ ಎಂಎಸ್ ಧೋನಿ ಮಹತ್ವದ
ವಿಶ್ವಕಪ್ ನಲ್ಲಿ ಧೋನಿ ನಂ.4 ಕ್ರಮಾಂಕದಲ್ಲಿ ಆಡಬೇಕು-ಸುರೇಶ್ ರೈನಾ
ವಿಶ್ವಕಪ್ ನಲ್ಲಿ ಧೋನಿ ನಂ.4 ಕ್ರಮಾಂಕದಲ್ಲಿ ಆಡಬೇಕು-ಸುರೇಶ್ ರೈನಾ
Updated on: 
2019 ರ ವಿಶ್ವಕಪ್ ನಲ್ಲಿ ಎಂಎಸ್ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮಾರ್ಗದರ್ಶಕರಾಗಿರಲಿದ್ದಾರೆ. ಅಷ್ಟೇ ಅಲ್ಲದೇ ಭಾರತ ವಿಶ್ವಕಪ್ ಗೆದ್ದರೆ ಅದರಲ್ಲಿ ಎಂಎಸ್ ಧೋನಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದ್ದಾರೆ. 
ಹಿಂದೂಸ್ಥಾನ್ ಟೈಮ್ಸ್ ನೊಂದಿಗೆ ಮಾತನಾಡಿರುವ ರೈನಾ, ವಿರಾಟ್ ಕೊಹ್ಲಿ ಹಾಗೂ ಧೋನಿ ಕುರಿತು ಮಾತನಾಡಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಟೂರ್ನಿಗಳಲ್ಲಿ ಧೋನಿ ಆಡಿದ ರೀತಿ ತಂಡದಲ್ಲಿರುವ ಯುವ ಆಟಗಾರರಿಗೆ ಮಾರ್ಗದರ್ಶನವಿದ್ದಂತೆ ಎಂದು ಹೇಳಿದ್ದಾರೆ. 
ಧೋನಿ ಬಹಳ ಏರಿಳಿತಗಳನ್ನು ನೋಡಿದ್ದಾರೆ, ವಿಶ್ವಕಪ್ ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್ ಫೈನಲ್ ಗಳಲ್ಲಿಯೂ ಆಡಿದ್ದಾರೆ. ಆದ್ದರಿಂದ ವಿರಾಟ್ ಕೊಹ್ಲಿಗೆ ಧೋನಿ ಮಾರ್ಗದರ್ಶಕರಾಗಿರಲಿದ್ದಾರೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರೈನಾ, ವಿಶ್ವಕಪ್ ನಲ್ಲಿ ಧೋನಿ ನಂ.4 ರ ಕ್ರಮಾಂಕದಲ್ಲಿ ಬ್ಯಾತಿಂಗ್ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ.
ಇನ್ನು ಕೊಹ್ಲಿ ಏಕೆ ವಿಶೇಷ ಆಟಗಾರ ಎನಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ರೈನಾ, ಇಷ್ಟೆಲ್ಲಾ ಸಾಧಿಸಿದ ನಂತರವೂ ಕೊಹ್ಲಿಯಲ್ಲಿ ಮತ್ತಷ್ಟು ಸಾಧಿಸುವ ಬಯಕೆ ಇದೆ, ಇದೇ ಅವರನ್ನು ವಿಶೇಷ ಆಟಗಾರನನ್ನಾಗಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com