ಆಸ್ಟ್ರೇಲಿಯಾ ವಿರುದ್ಧ ಒಡಿಐ, ನ್ಯೂಜಿಲ್ಯಾಂಡ್ ಟೂರ್: ಬುಮ್ರಾಗೆ ವಿಶ್ರಾಂತಿ, ತಂಡದಲ್ಲಿ ಯಾರಿಗೆ ಸ್ಥಾನ?; ಇಲ್ಲಿದೆ ಮಾಹಿತಿ

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಹಾಗೂ ಆ ಬಳಿಕ ಬರುವ ನ್ಯೂಜಿಲ್ಯಾಂಡ್ ಟೂರ್ ಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು,
ಕ್ರಿಕೆಟ್
ಕ್ರಿಕೆಟ್
Updated on
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಹಾಗೂ ಆ ಬಳಿಕ ಬರುವ ನ್ಯೂಜಿಲ್ಯಾಂಡ್ ಟೂರ್ ಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. 
ಜಸ್ಪ್ರೀತ್ ಬುಮ್ರಾ ಬದಲು ಮೊಹಮ್ಮದ್ ಸಿರಾಜ್ ಗೆ ಸ್ಥಾನ ನೀಡಲಾಗಿದ್ದು, ಆಸ್ಟ್ರೇಲಿಯಾ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. 
ಮೂರು ಪಂದ್ಯಗಳಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಂಜಾಬ್ ನ ವೇಗಿ ಸಿದ್ಧಾರ್ಥ್ ಕೌಲ್ ಸಹ ಸ್ಥಾನ ಗಿಟ್ಟಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಒಡಿಐ ಶನಿವಾರದಿಂದ ಪ್ರಾರಂಭವಾಗಲಿದ್ದು 23 ರಿಂದ ನ್ಯೂಜಿಲ್ಯಾಂಡ್ ವಿರುದ್ಧದ 5 ಏಕದಿನ ಹಾಗೂ 3 ಟಿ 20 ಸರಣಿ ಪ್ರಾರಂಭವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com