ಡಿಆರ್‌ಎಸ್‌ನಲ್ಲಿ ಮತ್ತೆ ಎಡವಿದ ಎಂಎಸ್ ಧೋನಿ, ರಿಪ್ಲೇ ನೋಡಿ ಕೊಹ್ಲಿ ಸಿಟ್ಟಾಗಿದ್ದೇಕೆ? ವಿಡಿಯೋ ನೋಡಿ!

ಡಿಆರ್‌ಎಸ್‌ ಅಂದ್ರೆ(ಧೋನಿ ರಿವ್ಯೂ ಸಿಸ್ಟಂ) ಎಂದೇ ಕರೆಯಲಾಗುತ್ತಿತ್ತು. ಅಷ್ಟು ನಿಖರವಾಗಿ ಅಪೀಲ್ ಮಾಡುತ್ತಾರೆ. ಆದರೆ ವಿಶ್ವಕಪ್ ನಲ್ಲಿ ಎಂಎಸ್ ಧೋನಿ ಪದೇ ಪದೇ ಡಿಆರ್‌ಎಸ್‌ನಲ್ಲಿ ಎಡವುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಜೇಸನ್ ರಾಯ್-ಎಂಎಸ್ ಧೋನಿ-ವಿರಾಟ್ ಕೊಹ್ಲಿ
ಜೇಸನ್ ರಾಯ್-ಎಂಎಸ್ ಧೋನಿ-ವಿರಾಟ್ ಕೊಹ್ಲಿ
Updated on
ಲಂಡನ್: ಡಿಆರ್‌ಎಸ್‌ ಅಂದ್ರೆ(ಧೋನಿ ರಿವ್ಯೂ ಸಿಸ್ಟಂ) ಎಂದೇ ಕರೆಯಲಾಗುತ್ತಿತ್ತು. ಅಷ್ಟು ನಿಖರವಾಗಿ ಅಪೀಲ್ ಮಾಡುತ್ತಾರೆ. ಆದರೆ ವಿಶ್ವಕಪ್ ನಲ್ಲಿ ಎಂಎಸ್ ಧೋನಿ ಪದೇ ಪದೇ ಡಿಆರ್‌ಎಸ್‌ನಲ್ಲಿ ಎಡವುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. 
ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರಂಭಿಕ ಆಟಗಾರರಾದ ಜೇಸನ್ ರಾಯ್ ಮತ್ತು ಬೇಸ್ಟೋ ಅದ್ಭುತ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದರು. ಆದರೆ ಆರಂಭದಲ್ಲೇ ಜೇಸನ್ ರಾಯ್ ಔಟ್ ಆಗಿದ್ದರೆ ಇಂಗ್ಲೆಂಡ್ ಗೆ ಗೆಲುವು ಕಷ್ಟವಾಗುತ್ತಿತ್ತು. 
ಹಾರ್ದಿಕ್ ಪಾಂಡ್ಯರ ಎಸೆದ ಚೆಂಡು ಜೇಸನ್ ರಾಯ್ ಅವರ ಗ್ಲೌಸ್ ಗೆ ತಲುಗಿ ಕೀಪರ್ ಧೋನಿ ಕೈಸೇರಿತ್ತು. ಈ ವೇಳೆ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಕೊಹ್ಲಿ ಔಟ್ ಗೆ ಅಪೀಲ್ ಮಾಡಿದರು. ಆದರೆ ಅಂಪೈರ್ ಔಟ್ ತೀರ್ಪು ನೀಡಲಿಲ್ಲ. ಈ ವೇಳೆ ಕೊಹ್ಲಿ ಮತ್ತು ಹಾರ್ದಿಕ್ ಡಿಆರ್‌ಎಸ್‌ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಆದರೆ ಧೋನಿ ನಿರುತ್ಸಾಹ ತೋರಿದ್ದರಿಂದ ಕೊಹ್ಲಿ ಸುಮ್ಮನಾದರು. 
ನಂತರ ರಿಪ್ಲೇನಲ್ಲಿ ನೋಡಿದಾಗ ಜೇಸನ್ ರಾಯ್ ಔಟಾಗಿರುವುದು ಸ್ಪಷ್ಟವಾಗಿ ತಿಳಿಯಿತು. ಇದರಿಂದ ಮೈದಾನದಲ್ಲೇ ಕೊಹ್ಲಿ ಸಿಟ್ಟಾದರೂ ನಂತರ ಸುಮ್ಮನಾದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com